ಬೆಂಗಳೂರು: ಉನ್ನತ ಶಿಕ್ಷಣ ಪಡೆದು ಐಟಿ-ಬಿಟಿ ಉದ್ಯೋಗಿ ಎಂದು ನಟಿಸುತ್ತಾ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಖತರ್ನಾಕ್ ಡ್ರಗ್ ಪೆಡ್ಲರ್(Drug Peddling) ನನ್ನು ಬೆಂಗಳೂರು ಪೊಲೀಸರು (Bengaluru Police) ಬಂಧಿಸಿದ್ದಾರೆ.
ಬಂಧಿತನನ್ನು ಕೇರಳದ ಕೊಲ್ಲಂ ಮೂಲದ ಆದರ್ಶ ಎಂದು ಗುರುತಿಸಲಾಗಿದೆ. ಆದರ್ಶ ತನ್ನ ಪರಿಚಯದವರ ಬಳಿ ನಾನು IT-BT ಎಂಪ್ಲಾಯ್ (IT-BT employee) ಎಂದು ಹೇಳಿಕೊಂಡು ನಂಬಿಸುತ್ತಿದ್ದ. ಈ ಕಾರಣದಿಂದ ಪೊಲೀಸರಿಗೂ ಕೂಡ ಈತನ ಮೇಲೆ ಅನುಮಾನ ಬರುತ್ತಿರಲಿಲ್ಲ.ಮಕೇರಳದ ಕೊಲ್ಲಂನಲ್ಲಿ ಎಂಜಿನಿಯರಿಂಗ್ (Engineering) ಮುಗಿಸಿ ಬೆಂಗಳೂರಿಗೆ ಕೆಲಸ ಅರಸಿ ಬಂದಿದ್ದ. ಆದರೆ, ಸಾಫ್ಟ್‌ವೇರ್ ಕಂಪನಿಗಳಲ್ಲಿ ಕೆಲಸ ಮಾಡುವುದು ತಲೆನೋವು. ಸುಲಭವಾಗಿ ಮತ್ತು ವೇಗವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಕೊರಿಯರ್ ಮೂಲಕ ಗುಪ್ತವಾಗಿ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ
ಕೇರಳದ ಕೊಲ್ಲಂನಿಂದ MDMA ಪಿಲ್ಸ್ ಮತ್ತು ಗಾಂಜಾವನ್ನು ಒಂದು ಸಾವಿರ ರೂಪಾಯಿ ಬೆಲೆಯ ತಂದು, ಡಬಲ್ ರೇಟ್‌ಗೆ ಬೆಂಗಳೂರಿನಲ್ಲಿ ಖಾಕಿ ಕಣ್ತಪ್ಪಿಸಿ ಡ್ರಗ್ಸ್ ಮಾರ್ತಿದ್ದ ಆದರ್ಶನ ಕೊರಿಯರ್ ಜಾಡು ಹಿಡಿದು ಹುಡುಕಾಟ ನಡೆಸಿದ್ದ ಚಿಕ್ಕಜಾಲ ಪೊಲೀಸರು(Chikkajala Police), ಇದೀಗ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೂ ಇದೇ ವೇಳೆ ಆತನಿಂದ 10 ಗ್ರಾಂ MDMA ಮಾದಕ ವಸ್ತುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ






