ಹುಬ್ಬಳ್ಳಿ: ವಿದ್ಯುತ್ ಸ್ಪರ್ಶಿಸಿ 24 ವರ್ಷದ ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಮೃತಪಟ್ಟ ಯುವತಿಯನ್ನು ಮೇಘನಾ (Meghana) (24) ಎಂದು ಗುರುತಿಸಲಾಗಿದ್ದು, ಹುಬ್ಬಳ್ಳಿ (Hubballi) ನಗರದ ಮೂರು ಸಾವಿರ ಮಠದ ಬಳಿ ಇರುವ ಅವರ ನಿವಾಸದಲ್ಲಿ ಸುಮಾರು ಒಂದು ತಿಂಗಳ ಹಿಂದೆ ಘಟನೆ ನಡೆದಿದೆ.
ಮೇಘನಾ ಅವರು ಮನೆಯಲ್ಲಿ ಹಚ್ಚಿದ್ದ ಮೋಟಾರ್ ಅನ್ನು ಆಫ್ ಮಾಡಲು ಹೋಗಿದ್ದರು. ಈ ಸಂದರ್ಭದಲ್ಲಿ ಅವರಿಗೆ ದಿಢೀರನೆ ವಿದ್ಯುತ್ (Electrocuted)ತಗುಲಿದೆ. ವಿದ್ಯುತ್ ಸ್ಪರ್ಶದಿಂದಾಗಿ ತೀವ್ರ ಅಸ್ವಸ್ಥಗೊಂಡಿದ್ದ ಮೇಘನಾ ಅವರನ್ನು ಕೂಡಲೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ (KIMS Hospital) ರವಾನಿಸಲಾಗಿತ್ತು. ಆದರೆ, ದುರಾದೃಷ್ಟವಶಾತ್ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಈ ಘಟನೆ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ(Upanagar Police Station) ನಡೆದಿದೆ.






