ಚಿತ್ರದುರ್ಗ: ರಾಜ್ಯ ಕಾಂಗ್ರೆಸ್‌ನಲ್ಲಿ (state Congress) ಮುಖ್ಯಮಂತ್ರಿ ಕುರ್ಚಿ ಕದನ (CM Chair Tussle) ತೀವ್ರವಾಗಿ ನಡೆಯುತ್ತಿರುವ ಮಧ್ಯೆಯೇ, ದಲಿತ ಸಿಎಂ (Dalit CM) ಕೂಗು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಮುಖ್ಯಮಂತ್ರಿ ಬದಲಾವಣೆ ಮಾಡುವ ನಿರ್ಧಾರಕ್ಕೆ ಹೈಕಮಾಂಡ್ ಬಂದರೆ, ಆ ಸ್ಥಾನವನ್ನು ದಲಿತ ಸಮುದಾಯಕ್ಕೆ ನೀಡಬೇಕು ಎಂದು ಮಾದಾರ ಚೆನ್ನಯ್ಯ ಮಠದ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ (Sri Madara Channayya Swamiji )ಅವರು ಬಲವಾದ ಬೇಡಿಕೆ ಇಟ್ಟಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಚೆನ್ನಯ್ಯ ಸ್ವಾಮೀಜಿ ಅವರು, ಸದ್ಯ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯ ಅವರನ್ನು ಕೆಳಗೆ ಇಳಿಸಿ ಎಂದು ನಾವು ಕೇಳುತ್ತಿಲ್ಲ. ಸಿಎಂ ಆಗಿ ಸಿದ್ದರಾಮಯ್ಯ ಅವರು ಮುಂದುವರಿದರೆ ನಮ್ಮ ಯಾವುದೇ ಅಡ್ಡಿಯಿಲ್ಲ. ಒಂದು ವೇಳೆ ಸಿಎಂ ಬದಲಾವಣೆ ಮಾಡೋದಾದರೆ, ಆ ಸ್ಥಾನವನ್ನು ನಮ್ಮ ದಲಿತ ಸಮಾಜಕ್ಕೆ ಕೊಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ.
ಈ ಸ್ಥಾನಕ್ಕೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ(AICC President Mallikarjun Kharge), ಸಚಿವರಾದ ಡಾ. ಜಿ. ಪರಮೇಶ್ವರ್ (Ministers Dr. G. Parameshwara) ಮತ್ತು ಕೆ.ಎಚ್. ಮುನಿಯಪ್ಪ (K.H. Muniyappa ) ಅವರಂತಹ ಪ್ರಬಲ ದಲಿತ ನಾಯಕರು ಪಕ್ಷದಲ್ಲಿ ಲಭ್ಯವಿದ್ದಾರೆ. ಅವರಿಗೂ ಒಂದು ಅವಕಾಶ ನೀಡಬೇಕು ಎಂದು ಸ್ವಾಮೀಜಿ ಒತ್ತಾಯಿಸಿದ್ದಾರೆ. ಈ ಮೂಲಕ, ಸಿದ್ದರಾಮಯ್ಯ ಬಣ ಮತ್ತು ಡಿ.ಕೆ. ಶಿವಕುಮಾರ್ ಬಣಗಳ ನಡುವಿನ ಹೋರಾಟದಲ್ಲಿ, ದಲಿತ ಸಿಎಂ ವಿಷಯವು ಮೂರನೇ ಪ್ರಬಲ ಕೂಗಾಗಿ ಕೇಳಿಬಂದಿದೆ.






