ಬೆಂಗಳೂರು: ಬೆಂಗಳೂರು ಮಹಾನಗರದಲ್ಲಿ ನಡೆಯುತ್ತಿರುವ ಬೆಸ್ಕಾಂ ಇಂಜಿನಿಯರ್ಸ್ ಅಸೋಸಿಯೇಶನ್ (BESCOM Engineers’ Association) ಚುನಾವಣೆಯ ಹೆಸರಿನಲ್ಲಿ ಸಾವಿರಾರು ಬ್ಯಾನರ್ (Banner) ಮತ್ತು ಹೋರ್ಡಿಂಗ್ಸ್‌ಗಳ (Hoardings) ಹಾವಳಿ ಶುರುವಾಗಿದೆ. ಸ್ವತಃ ಸರ್ಕಾರಿ ಇಲಾಖೆಯ ಇಂಜಿನಿಯರ್‌ಗಳೇ ಹೈಕೋರ್ಟ್‌ನ (High Court) ಆದೇಶ ಮತ್ತು ನಗರ ಪಾಲಿಕೆಯ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.
ಆನಂದ್ ರಾವ್ ಸರ್ಕಲ್, ಗಾಂಧಿನಗರ, ರೇಸ್‌ಕೋರ್ಸ್ ರಸ್ತೆ ಮತ್ತು ಇಂಧನ ಭವನದ ರಸ್ತೆಗಳ ತುಂಬೆಲ್ಲಾ ಈ ಹೋರ್ಡಿಂಗ್ಸ್‌ಗಳು ರಾರಾಜಿಸುತ್ತಿವೆ. ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬೆಂಗಳೂರು ಗ್ರಾಮಾಂತರ ಸುಪರಿಟೆಂಡೆಂಟ್ ಇಂಜಿನಿಯರ್ ಬಸವಣ್ಣ, ಹೆಬ್ಬಾಳ ಕಾರ್ಯ ನಿರ್ವಾಹಕ ಅಭಿಯಂತರ ಶಿವರಾಮ್, ಮತ್ತು KPTCL ಕಾರ್ಯನಿರ್ವಾಹಕ ಅಭಿಯಂತರ ಸುಧಾಕರ್ ಅವರ ಫೋಟೋಗಳಿರುವ ಬ್ಯಾನರ್‌ಗಳು ಅತಿ ಹೆಚ್ಚಾಗಿವೆ. ಇವರುಗಳು ಯಾವುದೇ ಅನುಮತಿ (Permission) ಪಡೆಯದೆ ಈ ಬ್ಯಾನರ್‌ಗಳನ್ನು ರಾಜಾರೋಷವಾಗಿ ಅಳವಡಿಸಿರುವುದು ನಿಯಮಬಾಹಿರ (Illegal) ಕೃತ್ಯವಾಗಿದೆ.
ಜಿಬಿಎ (GBA) ಮತ್ತು ಅಧಿಕಾರಿಗಳ ಮೌನ
ಈ ಬ್ಯಾನರ್ ಹಾವಳಿಗಳ ಕುರಿತು ಜಿಬಿಎ ಅಧಿಕಾರಿಗಳು ಮತ್ತು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ (City Corporation Commissioner Rajendra Cholan), ಮುಖ್ಯ ಆಯುಕ್ತ ಮಹೇಶ್ವರ್ ರಾವ್ (Chief Commissioner Maheshwar Rao) ಅವರ ಗಮನಕ್ಕೆ ಬಂದಿಲ್ಲವೇ ಎಂಬ ಪ್ರಶ್ನೆ ಎದ್ದಿದೆ. ಜನಸಾಮಾನ್ಯರು ಒಂದೆರರಡು ಬ್ಯಾನರ್‌ಗಳನ್ನು ಹಾಕಿದರೆ ಕೂಡಲೇ FIR (ಪ್ರಥಮ ಮಾಹಿತಿ ವರದಿ), ದಂಡ ಹಾಕಿ ಕ್ರಮ ತೆಗೆದುಕೊಳ್ಳುವ ಅಧಿಕಾರಿಗಳು, ಸರ್ಕಾರಿ ಇಂಜಿನಿಯರ್‌ಗಳ ಈ ನಿಯಮಬಾಹಿರ ನಡೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಏಕೆ?
ಇವರಿಗೆ ಮೇಲಾಧಿಕಾರಿಗಳು ಮತ್ತು ಕಾನೂನಿನ ಭಯ ಇಲ್ಲವೇ?”ಎಂಬ ಕೂಗು ಕೇಳಿಬರುತ್ತಿದ್ದು, ರಾಜಕಾರಣಿಗಳನ್ನೂ ನಾಚಿಸುವಂತೆ ಇಂಜಿನಿಯರ್‌ಗಳು ಈ ರೀತಿ ವರ್ತಿಸುತ್ತಿರುವುದು ನಗರದ ಸೌಂದರ್ಯಕ್ಕೆ ಧಕ್ಕೆ ತಂದಿದೆ. ಬೆಸ್ಕಾಂ ಇಂಜಿನಿಯರ್‌ಗಳ ಈ ಕೃತ್ಯವು, ನಡೆಯುತ್ತಿರುವುದು ‘ಚುನಾವಣೆಯೋ ಅಥವಾ ನಗರದ ಸೌಂದರ್ಯವನ್ನು ಹಾಳುಮಾಡುವ ಕಾರ್ಯವೋ?’ ಎಂಬ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.






