Home State Politics National More
STATE NEWS

Prime Minister ನರೇಂದ್ರ ಮೋದಿಯವರಿಗೆ ಅದ್ಧೂರಿ ಸ್ವಾಗತ ಕೋರಿದ ಕೃಷ್ಣನಗರಿ ಜನತೆ

Modi udupi
Posted By: Meghana Gowda
Updated on: Nov 28, 2025 | 6:29 AM

ಉಡುಪಿ: ಪ್ರಧಾನಮಂತ್ರಿ (Prime Minister) ಆದ ನಂತರ ಇದೇ ಮೊದಲ ಬಾರಿಗೆ ಉಡುಪಿಗೆ (Udupi) ಆಗಮಿಸಿರುವ ನರೇಂದ್ರ ಮೋದಿ (Narendra Modi) ಅವರಿಗೆ ಕರಾವಳಿಯ ಜನತೆ ಅತ್ಯಂತ ಅದ್ದೂರಿ ಮತ್ತು ಹೃದಯಸ್ಪರ್ಶಿ ಸ್ವಾಗತ ಕೋರಿದ್ದಾರೆ. ಲಕ್ಷಾಂತರ ಮಂದಿ ಸೇರಿ ಪ್ರಧಾನಿ ಮೇಲೆ ಹೂಮಳೆ ಸುರಿಸಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

ನವದೆಹಲಿಯಿಂದ ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ, ಅಲ್ಲಿಂದ ಸೇನಾ ಹೆಲಿಕಾಪ್ಟರ್‌ನಲ್ಲಿ ಉಡುಪಿಯ ಹೆಲಿಪ್ಯಾಡ್‌ಗೆ (Helipad) ಬಂದಿಳಿದರು. ನಂತರ ಹೆಲಿಪ್ಯಾಡ್‌ನಿಂದಲೇ ಭವ್ಯವಾದ ರೋಡ್ ಶೋ (Road Show) ಆರಂಭವಾಗಿದ್ದು, ರೋಡ್ ಶೋ ಆರಂಭವಾದಾಗಿನಿಂದಲೂ ರಸ್ತೆಯ ಇಕ್ಕೆಲಗಳಲ್ಲಿ ಲಕ್ಷಾಂತರ ಮಂದಿ ನಿಂತು ಜೈಘೋಷಗಳನ್ನು ಕೂಗಿ, ಹೂಮಳೆ ಸುರಿಸಿ ಸ್ವಾಗತಿಸಿದ್ದಾರೆ.

ನಂತರ ಮೋದಿಯವರು  ಶ್ರೀ ಕೃಷ್ಣ ಮಠಕ್ಕೆ ಭೇಡಿ ನೀಡಿ ಕನಕನ ಕಿಂಡಿ ಸ್ವರ್ಣ ಲೇಪನ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.  ಲಕ್ಷಕಂಠ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಭಗವದ್ಗೀತೆಯ 10 ಶ್ಲೋಕಗಳನ್ನ ಮೋದಿ ಪಠಿಸಲಿದ್ದಾರೆ.

Shorts Shorts