ಗೋವಾ: ಮಠವು ಪರಂಪರೆ ಹಾಗೂ ಆಧುನಿಕತೆಯ ಜೊತೆ ಸೇತುವೆಯಾಗುವ ಪ್ರಮುಖ ಭೂಮಿಕೆಯಾಗಲಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಶಿಸಿದರು.
ಪರ್ತಗಾಳಿ ಜೀವೋತ್ತಮ ಮಠದಲ್ಲಿ ಶುಕ್ರವಾರ 77 ಅಡಿ ಎತ್ತರದ ರಾಮನ ಕಂಚಿನ ಮೂರ್ತಿಯನ್ನು ಅನಾವರಣ ಮಾಡಿ, ಮಠದ 550ನೇ ವರ್ಷದ ಅಂಗವಾಗಿ ಕೇಂದ್ರ ಸರ್ಕಾರ ಹೊರ ತಂದ ನಾಣ್ಯ ಹಾಗೂ ಅಂಚೆ ಚೀಟಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ಇಲ್ಲಿ ಉದ್ಘಾಟನೆಯಾದ ರಾಮನ ಪ್ರತಿಮೆ, ಥೀಮ್ ಪಾರ್ಕ್ ಹಾಗೂ ತ್ರೀಡಿ ಚಿತ್ರವು ಮಠಕ್ಕೆ ಹೊಸ ಆಯಾಮ ನೀಡಿದೆ. ಅದು ಬರುವ ಪೀಳಿಗೆಗೆ ಜ್ಞಾನ, ಪ್ರೇರಣೆ ಹಾಗೂ ಸಾಧನೆಯ ಸ್ಥಾಯಿ ಕೇಂದ್ರವಾಗಿ ಬೆಳೆಯಲಿ, ಬರುವ ಪೀಳಿಗೆಗೆ ಆಧ್ಯಾತ್ಮದ ಚೇತನ ನೀಡಲಿ ಎಂದು ಹಾರೈಸಿದರು.
ದೇಶ, ಸಮಾಜದಲ್ಲಿ ಪರಿವರ್ತನೆ ವಿವಿಧ ಸವಾಲುಗಳ ನಡುವೆ ಮಠವು ತನ್ನ ದಿಕ್ಕು ಬಿಡಲಿಲ್ಲ. ಉದ್ದೇಶ ಬಿಡಲಿಲ್ಲ. ಮಠವು ಜನರಿಗೆ ದಿಕ್ಕು ತೋರಿಸುವ ಕೇಂದ್ರವಾಯಿತು. ಇದೇ ಮಠದ ಪ್ರಮುಖ ಗುರುತು. ಇತಿಹಾಸದಲ್ಲಿ ಜಡವಾಗಿಯೂ ಸಮಯದ ಜತೆ ಹೊರಟಿತು. ಮಠದ ಉದ್ದೇಶ ಸಾಧನೆಯನ್ನು ಸೇವೆಯಿಂದ ಜೋಡಿಸುವುದು, ಪರಂಪರೆಯನ್ನು ಲೋಕ ಕಲ್ಯಾಣದ ಜತೆ ಜೋಡಿಸುವುದಾಗಿದೆ. ಆಧ್ಯಾತ್ಮದ ಮೂಲ ಉದ್ದೇಶ ಜೀವನಕ್ಕೆ ಸ್ಥಿರತೆ, ಸಮತೋಲನ, ಮೌಲ್ಯ ಪ್ರಧಾನ ಮಾಡುವುದಾಗಿದೆ. ಮಠದ 550 ವರ್ಷದ ಯಾತ್ರೆ ಸಮಾಜದವನ್ನು ಕಠಿಣ ಸಮಯದಲ್ಲೂ ಸಂಬಾಳಿಸಿಕೊಂಡು ಬಂತು ಎಂದು ಮಠದ ಇತಿಹಾಸ, ಪರಂಪರೆಯನ್ನು ಶ್ಲಾಘಿಸಿದರು.
ಮಠದ ಜೊತೆ ಜೋಡಿಸಿಕೊಂಡ ಸಮಾಜದ ಕುಟುಂಬಗಳು ಉತ್ಕೃಷ್ಟ ಜೀವನ ನಡೆಸುತ್ತಿವೆ. ಮಠವು ವಿನಮೃತೆ, ಸಂಸ್ಕಾರ, ಸೇವಾವವನ್ನು ಹೇಳಿಕೊಡುತ್ತದೆ. ಮುಂದೆಯೂ ಮುಂದಿನ ಪೀಳಿಗೆಗೆ ಮಠವು ಇದೇ ರೀತಿ ಪ್ರೇರಣೆ ನೀಡುತ್ತಿರಲಿ ಎಂದು ಆಶಿಸಿದರು. ಮಠವು 550 ವರ್ಷ ಪೂರೈಸುತ್ತಿರುವ ಐತಿಹಾಸಿಕ ಸನ್ನಿವೇಶವಾಗಿದೆ. ಎಂದ ಮೋದಿ ಅವರು, ವಿದ್ಯಾಧೀಶ ಸ್ವಾಮಿಗಳು, ಸಮಿತಿಯ ಎಲ್ಲ ಸ್ವಾಮಿಗಳಿಗೂ ಐತಿಹಾಸಿಕ ಸಂದರ್ಭದ ಶುಭಾಶಯ ಹೇಳುತ್ತೇನೆ ಎಂದರು.
ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಮೋದಿ ಅವರು ಚಾತುರ್ಮಾಸ್ಯ, ನವರಾತ್ರಿ ವೃತ ಮಾಡಿ ದೇಶದ ಜನರಿಗೆ ಮಾದರಿಯಾಗಿದ್ದಾರೆ. 2047 ರಲ್ಲಿ ಭಾರತ ವಿಕಸಿತವಾಗಿ ಮಾಡಲು ಏಕಾದಶಿ ಉಪವಾಸ ಮಾಡಿ ಎಂದು ಸಲಹೆ ನೀಡಿದರು. ಮೋದಿ ಅವರು ಪ್ರಧಾನಿ ಆಗುತ್ತಾರೆ ಎಂಬುದು ಗೋವಾದಲ್ಲೇ ಮೊದಲ ಬಾರಿ ಘೋಷಣೆಯಾಗಿತ್ತು. ಮೋದಿ ಅವರ ಸಾಧನೆಯ ಹಿಂದೆ ಅವರ ತಾಯಿ ಹೀರಾಬೆನ್ ಮೋದಿಜಿ ಅವರಿಗೆ ಸಲ್ಲುತ್ತದೆ. ಅವರು ವಜ್ರದಂಥ ಪುತ್ರನನ್ನು ಕೊಟ್ಟಿದ್ದಾರೆ. ಅವರು ಧರ್ಮ ಪುತ್ರನನ್ನು ಕೊಟ್ಟಿದ್ದಾರೆ. ಅವರ ವಜ್ರದಂತೆ ಪ್ರಕಾಶಿಸುತ್ತಿದ್ದಾರೆ. ಪರಿಣಾಮ ಭಾರತವೂ ಪ್ರಕಾಶಿಸುತ್ತಿದೆ. ದುರ್ಯೋಧನ, ಯುಧಿಷ್ಠಿರ ಹಾಗೂ ಶ್ರೀ ಕೃಷ್ಣ ಮಹಾಭಾರತದಲ್ಲಿ ದುರ್ಯೋಧನ ಯಾವಾಗಲೂ ತನ್ನ ಬಗ್ಗೆಯೇ ಯೋಚಿಸುತ್ತಿದ್ದ. ಯುದಿಷ್ಠಿರ ತನ್ನ ಕುಟುಂಬದ ಬಗ್ಗೆ ಯೋಜಿಸುತ್ತಿದ್ದ. ಶ್ರೀ ಕೃಷ್ಣ ಇಡೀ ವಿಶ್ವದ ಬಗ್ಗೆ ಯೋಜಿಸುತ್ತಿದ್ದ. ಆದರೆ, ಭಾರತದ ವಿರುದ್ಧ ಕೆಲಸ ಮಾಡುವ ಹಲವರಿಗೆ ಶ್ರೀ ಕೃಷ್ಣನಾಗಿ ಪಾಠ ಕಲಿಸುತ್ತಾರೆ ಎಂದರು.
ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ ಸಾವಂತ ಮಾತನಾಡಿದರು. ಮಠದ ಕೇಂದ್ರ ಸಮಿತಿ ಅಧ್ಯಕ್ಷ ಶ್ರೀನಿವಾಸ ಡೆಂಪೊ ಸ್ವಾಗತಿಸಿದರು. ಗೋವಾ ರಾಜ್ಯಪಾಲ ಪುಸಾಪತಿ ಅಶೋಕ ಗಜಪತಿರಾಜು, ಮುಖ್ಯಮಂತ್ರಿ, ಡಾ.ಪ್ರಮೋದ ಜಿ.ಸಾವಂತ್, ಕೇಂದ್ರ ಸಚಿವ ಶ್ರೀಪಾದ ಎಸ್ಸೋ ನಾಯಕ, ಗೋವಾದ ರಾಜ್ಯ ಸರ್ಕಾರದ ಸಚಿವರಾದ ದಿಗಂಬರ ಕಾಮತ್, ರಮೇಶ ತವಡಕರ್, ಆರ್.ಆರ್.ಕಾಮತ್ ವೇದಿಕೆಯಲ್ಲಿದ್ದರು.






