ಬೆಂಗಳೂರು: ಮುಖ್ಯಮಂತ್ರಿ (CM) ಕುರ್ಚಿ ಕದನದ (Chair Tussle) ನಡುವೆಯೇ, ಉಪಮುಖ್ಯಮಂತ್ರಿ (DCM) ಡಿ.ಕೆ. ಶಿವಕುಮಾರ್ (DK Shivakumar) ಅವರು ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಪರೋಕ್ಷವಾಗಿ ಟಾಂಟ್ ( taunt)ನೀಡಿದ್ದಾರೆ ಎನ್ನಲಾಗುತ್ತಿದೆ.
ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಸುವರ್ಣ ಮಹೋತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ, ಕಾಂಗ್ರೆಸ್ ಹಿರಿಯ ನಾಯಕರ ಅಧಿಕಾರ ತ್ಯಾಗದ (Power Sacrifice) ಉದಾಹರಣೆಗಳನ್ನು ನೀಡಿ, ಮುಖ್ಯಮಂತ್ರಿಗಳ ಎದುರೇ ಅವರಿಗೆ ತ್ಯಾಗದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.
ಡಿ.ಕೆ. ಶಿವಕುಮಾರ್ ಅವರು ತಮ್ಮ ಭಾಷಣದಲ್ಲಿ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರು ಕೂಡ ಅಧಿಕಾರ ತ್ಯಾಗ ಮಾಡಿ, ಮನಮೋಹನ್ ಸಿಂಗ್ (Manmohan Singh) ಅವರಿಗಾಗಿ ಅವರು ಪ್ರಧಾನಿ ಹುದ್ದೆಯನ್ನು ಬಿಟ್ಟುಕೊಟ್ಟರು.
ಹಿರಿಯ ನಾಯಕರ ತ್ಯಾಗದ ಉದಾಹರಣೆಗಳನ್ನು ಹೇಳುವ ಮೂಲಕ, ಡಿಕೆಶಿ ಅವರು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರವನ್ನು ತ್ಯಾಗ ಮಾಡುವ ಸಮಯದ ಕುರಿತು ಸಂದೇಶ ನೀಡಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರೇ ವೇದಿಕೆ ಮೇಲೆ ಇರುವಾಗ ಡಿಕೆಶಿ ಈ ರೀತಿಯ ಮಾತುಗಳನ್ನಾಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.






