ಬೆಂಗಳೂರು: ಖ್ಯಾತ ನಟ ಯಶ್ (Actor Yash) ಅವರು ಇತ್ತೀಚೆಗೆ ಕನ್ನಡ ರಾಜ್ಯೋತ್ಸವದ (Kannada Rajyotsava) ಕಾರ್ಯಕ್ರಮವೊಂದರಲ್ಲಿ ನೀಡಿದ ಒಂದು ಅಭಿಪ್ರಾಯ ಇದೀಗ ಕನ್ನಡ ಪರ ವಲಯಗಳಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ. “ನಾವು ಯಾರಿಗೂ ಬಲವಂತವಾಗಿ ಕನ್ನಡ ಕಲಿಸೋದು ಬೇಡ. ಕಲಿಯಲೇಬೇಕಾದ ಅನಿವಾರ್ಯತೆ ಸೃಷ್ಟಿಸಬೇಕು,” ಎಂಬ ಯಶ್ ಅವರ ಹೇಳಿಕೆ, ರಾಜ್ಯದಾದ್ಯಂತ ಪರ ಮತ್ತು ವಿರೋಧದ ದೊಡ್ಡ ಚರ್ಚೆಯೇ ನಡೆಯುತ್ತಿದೆ.
ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕೆಜಿಎಫ್ ಸ್ಟಾರ್ ಯಶ್, ಕರ್ನಾಟಕಕ್ಕೆ ಬರುವ ಹೊರ ರಾಜ್ಯದವರು ಇಲ್ಲಿನ ಸೌಹಾರ್ದಯುತ ವಾತಾವರಣವನ್ನು ಶ್ಲಾಘಿಸುತ್ತಾರೆ. ಹಾಗೇ ಇಲ್ಲಿರುವ ಬೇರೆ ರಾಜ್ಯದ ಜನತೆಗೆ ಬಲವಂತವಾಗಿ ಕನ್ನಡ ಕಲಿಯಿರಿ ಎಂದು ಫೈಟ್ ಮಾಡುವ ಬದಲು, ಇಲ್ಲಿ ಬದುಕಲು ಮತ್ತು ವ್ಯವಹರಿಸಲು ಕನ್ನಡ ತಿಳಿದಿರದಿದ್ದರೆ ಕಷ್ಟವಾಗುತ್ತದೆ ಎಂಬ ಭಾವನೆ ಬರುವಂತೆ ಸನ್ನಿವೇಶ ನಿರ್ಮಾಣ ಮಾಡಬೇಕು ಎಂದು ಹೇಳಿರುವ ಮಾತು ಇದೀಗಾ ಪರ-ವಿರೋಧದ ಚರ್ಚೆ ಹುಟ್ಟುಹಾಕಿದೆ.
ಈ ರೀತಿ ಯಶ್ ಅವರು ಹೇಲಿರುವ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿದಾಡುತ್ತಿದ್ದಂತೆ, ಅನೇಕ ಕನ್ನಡಿಗರು ಇದನ್ನು ತೀವ್ರವಾಗಿ ಖಂಡಿಸಿದ್ದಾರೆ. ವಿರೋಧಿಗಳು ಯಶ್‌ಗೆ ‘ಕನ್ನಡ ವಿರೋಧಿ’ ಅಥವಾ ‘ಕನ್ನಡ ತಾಯಿಗೆ ದ್ರೋಹ’ ಬಗೆದಿದ್ದಾರೆ. ಹಾಗೂ ಪ್ಯಾನ್ ಇಂಡಿಯಾ ಸ್ಟಾರ್ (Pan India Star) ಆದ ನಂತರ ಅವರು ತಮ್ಮ ಸಿನಿಮಾದ ಮಾರುಕಟ್ಟೆಗೋಸ್ಕರ ಕನ್ನಡದ ವಿಚಾರದಲ್ಲಿ ಮೃದು ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಆರೋಪಗಳು ವ್ಯಕ್ತವಾಗಿವೆ.
ಮತ್ತೊಂದು ಕಡೆ, ನಟ ಯಶ್ ಅವರ ಬೆಂಬಲಕ್ಕೆ ನಿಂತವರು, ಯಶ್ ಹೇಳಿದ್ದು ಸರಿಯಾಗಿದೆ. ಕರ್ನಾಟಕದವರು ವೃದು ಸ್ವಭಾವದವರು ಹಾಗೂ ಅವರು ಯಾರನ್ನು ಕನ್ನಡ ಮಾತನಾಡಿ ಎಂದು ಬೇಡುವ ಅವಶ್ಯಕತೆಯಿಲ್ಲ. ಹಾಗೂ ಬಲವಂತದಿಂದ ಯಾರೂ ಭಾಷೆ ಕಲಿಯುವುದಿಲ್ಲ. ಕನ್ನಡವನ್ನು ಅಗತ್ಯದ ಭಾಷೆಯನ್ನಾಗಿ ಮಾಡುವುದಷ್ಟೇ ಪರಿಣಾಮಕಾರಿ ಮಾರ್ಗ ಎಂದು ಯಶ್ ಅವರು ಹೇಳಿರುವುದು ಸರಿಯಾಗಿಯೇ ಇದೆ ಎಂದು ಅವರ ಅಭಿಮಾನಿಗಳು ಪರ ನಿಂತಿದ್ದಾರೆ.






