ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ (Karnataka Congress) ನಡೆಯುತ್ತಿರುವ ಮುಖ್ಯಮಂತ್ರಿ (CM) ಕುರ್ಚಿ ಕದನ (Chair Tussle) ಇದೀಗ ರೋಚಕ ಘಟ್ಟ ತಲುಪಿದೆ. ಪಟ್ಟು ಮತ್ತು ಬಿಗಿಪಟ್ಟುಗಳ ನಡುವೆ, ಇಂದು (ಶನಿವಾರ) ವರಿಷ್ಠರ ನಿರ್ಧಾರಕ್ಕೂ ಮುನ್ನವೇ ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ನಡುವೆ ಅತ್ಯಂತ ಮಹತ್ವದ ‘ಕ್ಲೋಸ್ ಡೋರ್’ (closed-door)ಸಭೆ ನಡೆಯಲಿದೆ.
ಸಿಎಂ ನಿವಾಸ ‘ಕಾವೇರಿ’ಯಲ್ಲಿ ಇಂದು ಬೆಳಿಗ್ಗೆ 9:30 ಕ್ಕೆ ಬ್ರೇಕ್‌ಫಾಸ್ಟ್ ಸಭೆ (Breakfast Meeting) ನಿಗದಿಯಾಗಿದೆ. ಈ ಸಭೆಯಲ್ಲಿ ಕೇವಲ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ಮಾತ್ರ ಮಾತುಕತೆ ನಡೆಯಲಿದೆ. ಇದು ಉಭಯ ನಾಯಕರ ನಡುವಿನ ಕ್ಲೋಸ್ ಡೋರ್ ಸಭೆಯಾಗಿದೆ.
ಇಬ್ಬರ ನಡುವೆ ನಡೆಯುತ್ತಿರುವ ಕುರ್ಚಿ ಶೀತಲ ಸಮರ ದಿಂದಾಗಿ ಸರ್ಕಾರ ಮತ್ತು ಪಕ್ಷದ ಇಮೇಜ್‌ಗೆ ಧಕ್ಕೆ (Damage) ಉಂಟಾಗಿದೆ. ಈ ಡ್ಯಾಮೇಜ್ ಸರಿಪಡಿಸುವುದಕ್ಕಾಗಿಯೇ ಒಗ್ಗಟ್ಟು ಪ್ರದರ್ಶನ (Unity Show) ಮಾಡುವ ಪ್ಲಾನ್ ಆಗಿದೆ.
ಪಕ್ಷದ ವರಿಷ್ಠರ ಸೂಚನೆ (High Command Directive) ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಇಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಸಭೆಗೆ ಕರೆದಿದ್ದಾರೆ. ಸಿಎಂ ಮತ್ತು ಡಿಸಿಎಂ ಇಬ್ಬರಿಗೂ ಕರೆ ಮಾಡಿ ಒಗ್ಗಟ್ಟು ಪ್ರದರ್ಶಿಸುವಂತೆ ಹೈಕಮಾಂಡ್ ಸೂಚಿಸಿತ್ತು ಎನ್ನಲಾಗಿದೆ.
ಈ ಬ್ರೇಕ್‌ಫಾಸ್ಟ್ ಮೀಟಿಂಗ್ ಮೂಲಕ ನಾಯಕರ ನಡುವಿನ ಭಿನ್ನಾಭಿಪ್ರಾಯಗಳು ಶಮನವಾಗುತ್ತವೆಯೇ ಅಥವಾ ಹೊಸ ತಿರುವು ಪಡೆಯುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.






