ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದಿತ್ವಾ ಚಂಡಮಾರುತದ (Ditwah Cyclone) ಪರಿಣಾಮದಿಂದಾಗಿ ಮೈನಡುಗಿಸುವಷ್ಟು ಚಳಿ ಆವರಿಸಿದೆ. ತಾಪಮಾನ (Temperature) ತೀವ್ರವಾಗಿ ಕುಸಿದಿದ್ದು, ಇನ್ನೆರಡು-ಮೂರು ದಿನಗಳ ಕಾಲ ಈ ಮೈ ಕೊರೆಯುವ ಚಳಿ ಮುಂದುವರಿಯುವ ಸಾಧ್ಯತೆಯಿದೆ. ಈ ಶೀತಗಾಳಿ ಮತ್ತು ಚಳಿಗೆ ಬೆಂಗಳೂರಿಗರು ತತ್ತರಿಸಿದ್ದು, ಅದರ ನೇರ ಪರಿಣಾಮ ಈಗ ಆರೋಗ್ಯದ ಮೇಲೆ ಬೀಳುತ್ತಿದೆ.
ಆಸ್ಪತ್ರೆಗಳಲ್ಲಿ ರೋಗಿಗಳ ದಂಡು
ಕಳೆದ 3-4 ದಿನಗಳಿಂದ ಶೀತ ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ ಆಸ್ಪತ್ರೆಗಳಿಗೆ (Hospitals) ದಾಖಲಾಗುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ನಗರದ ಆಸ್ಪತ್ರೆಗಳ ಹೊರರೋಗಿ ವಿಭಾಗಗಳು (OPD – Outpatient Department) ಸಂಪೂರ್ಣವಾಗಿ ಭರ್ತಿಯಾಗಿವೆ (House Full). ವಿಶೇಷವಾಗಿ ಮಕ್ಕಳು ಮತ್ತು ವಯೋವೃದ್ಧರ (Children and Elderly) ಆರೋಗ್ಯದ ಮೇಲೆ ಈ ಚಳಿ ಹೆಚ್ಚು ಪರಿಣಾಮ ಬೀರಿದೆ.
ಜನರು ಹೆಚ್ಚಾಗಿ ನೆಗಡಿ (Cold), ಶೀತ (Flu), ತಲೆನೋವು ಮತ್ತು ಜ್ವರದಂತಹ (Fever) ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಈ ಚಳಿಗಾಲದಲ್ಲಿ ಆದಷ್ಟು ಸ್ವೆಟರ್, ಮಫ್ಲರ್ (Muffler) ಮತ್ತು ಮಂಕಿಕ್ಯಾಪ್‌ಗಳನ್ನು ಬಳಸಿ ಚಳಿಯಿಂದ ರಕ್ಷಿಸಿಕೊಳ್ಳುವುದು ಉತ್ತಮ. ಒಂದು ವೇಳೆ ಆರೋಗ್ಯ ಸಮಸ್ಯೆ ಕಂಡುಬಂದರೆ ತಕ್ಷಣ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ.






