ಬೆಂಗಳೂರು: ನಟಿ ಸಮಂತಾ ರುಥ್ ಪ್ರಭು (Samantha Ruth Prabhu) ಅವರು ನಿರ್ದೇಶಕ ರಾಜ್ ನಿಡಿಮೋರು (Raj Nidimoru) ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸೋಮವಾರ (ಡಿಸೆಂಬರ್ ೦೧) ಬೆಳಿಗ್ಗೆ ಕೊಯಮತ್ತೂರಿನ ಈಶಾ ಯೋಗ ಕೇಂದ್ರದ (Isha Yoga Center) ಆವರಣದಲ್ಲಿರುವ ಭೈರವಿ ದೇವಸ್ಥಾನದಲ್ಲಿ(Bhairavi Temple) ವಿವಾಹವು ಸರಳವಾಗಿ ಕುಟುಂಬದವರು, ಆಪ್ತ ಸ್ನೇಹಿತರು ಮತ್ತು ಸಂಬಂಧಿಕರ ಸಮ್ಮುಖದಲ್ಲಿ ಈ ಮದುವೆ ಜರುಗಿದೆ. ಸಮಂತಾ ಮತ್ತು ರಾಜ್ ನಿಡಿಮೋರು ಇಬ್ಬರಿಗೂ ಇದು ಎರಡನೇ ವಿವಾಹವಾಗಿದೆ.
ನಾಗಚೈತನ್ಯ ಅವರೊಂದಿಗೆ ವಿಚ್ಛೇದನ (Divorce) ಪಡೆದ ನಂತರ ಸಮಂತಾ ಅವರು ನಿರ್ದೇಶಕ ರಾಜ್ ನಿಡಿಮೋರು (Director Raj Nidimoru) ಅವರೊಂದಿಗೆ ಡೇಟಿಂಗ್ (Dating) ಮಾಡುತ್ತಿದ್ದಾರೆ ಎಂಬ ಗುಸುಗುಸು 2024ರಿಂದಲೇ ಚಲಾವಣೆಯಲ್ಲಿತ್ತು. ಇದೀಗ ಈ ವಿವಾಹದ ಮೂಲಕ ಆ ಎಲ್ಲಾ ಊಹಾಪೋಹಗಳಿಗೆ ಅಧಿಕೃತ ತೆರೆ ಬಿದ್ದಿದೆ.
ರಾಜ್ ನಿಡಿಮೋರು ಅವರು ವೆಬ್ ಸರಣಿಗಳಾದ ‘ಫ್ಯಾಮಿಲಿ ಮ್ಯಾನ್’, ‘ಫರ್ಜಿ’ ಹಾಗೂ ಸಮಂತಾ ನಟಿಸಿದ ‘ದಿ ಫ್ಯಾಮಿಲಿ ಮ್ಯಾನ್ 2’ ಮತ್ತು ಮುಂಬರುವ ಸರಣಿ ‘ಸಿಟಾಡೆಲ್’ ಗಳ ನಿರ್ದೇಶಕ/ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ.






