Home State Politics National More
STATE NEWS

Swachh Survekshan 2025: ಅಗ್ರ 5 ಕೊಳಕು ನಗರಗಳಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಕೂಡ ಒಂದು..!

Swachh
Posted By: Meghana Gowda
Updated on: Dec 1, 2025 | 9:11 AM

ಬೆಂಗಳೂರು: ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣ (Swachh Survekshan) 2025 ರ ವರದಿಯು ಭಾರತದ ಪ್ರಮುಖ ಮಹಾನಗರಗಳ ಸ್ವಚ್ಛತೆ ಕುರಿತು ಆಘಾತಕಾರಿ ಸತ್ಯವನ್ನು ಹೊರಹಾಕಿದೆ. ವರ್ಷಗಳ ಸ್ವಚ್ಛ ಭಾರತ ಅಭಿಯಾನದ (Swachh Bharat Mission) ಪ್ರಯತ್ನಗಳ ಹೊರತಾಗಿಯೂ, ದೇಶದ ಪ್ರಮುಖ ಐದು ಕೊಳಕು ನಗರಗಳ ಪಟ್ಟಿಯಲ್ಲಿ (Dirtiest Cities) ಬೆಂಗಳೂರು (Bengaluru) ಸ್ಥಾನ ಪಡೆದಿದೆ.

 ಅಗ್ರ ಐದು ಕೊಳಕು ನಗರಗಳು 

Rank City Score (12,500ಕ್ಕೆ)
1 ಮಧುರೈ (Madurai) 4,823
2 ಲುಧಿಯಾನ (Ludhiana) 5,272
3 ಚೆನ್ನೈ (Chennai) 6,822
4 ರಾಂಚಿ (Ranchi) 6,835
5 ಬೆಂಗಳೂರು (Bengaluru) 6,842

ಮಧುರೈ ಅತ್ಯಂತ ಕಡಿಮೆ ಸ್ಕೋರ್‌ನೊಂದಿಗೆ (4823) ಕೊಳಕು ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದರೆ, ಸಿಲಿಕಾನ್ ಸಿಟಿ ಬೆಂಗಳೂರು ಐದನೇ ಅತ್ಯಂತ ಕೊಳಕು ನಗರ ಎಂದು ಗುರುತಿಸಲ್ಪಟ್ಟಿದೆ.

ಬೆಂಗಳೂರಿನ ಕಳಪೆ ಪ್ರದರ್ಶನಕ್ಕೆ ಕಾರಣ: ಕಳೆದ ವರ್ಷದ ಶ್ರೇಯಾಂಕಗಳಿಗೆ ಹೋಲಿಸಿದರೆ ಈ ಬಾರಿ ಹಲವು ದೊಡ್ಡ ನಗರಗಳು ಕೆಟ್ಟ ಪ್ರದರ್ಶನ ನೀಡಿವೆ. ಬೆಂಗಳೂರಿನ ಕಳಪೆ ಪ್ರದರ್ಶನಕ್ಕೆ  ಐಟಿ ನೇತೃತ್ವದ ಕ್ಷಿಪ್ರ ಮತ್ತು ಅನಿಯಂತ್ರಿತ ನಗರೀಕರಣವು ಮೂಲಸೌಕರ್ಯಗಳ ಮೇಲೆ ತೀವ್ರ ಒತ್ತಡ ಹೇರಿದ್ದು. ಕಸವನ್ನು ವಿಂಗಡಿಸದೆ ಎಲ್ಲೆಂದರಲ್ಲಿ ಎಸೆಯುವುದು, ತುಂಬಿ ಹರಿಯುವ ಕಸದ ತೊಟ್ಟಿಗಳು ಮತ್ತು ವೈಜ್ಞಾನಿಕವಲ್ಲದ ತ್ಯಾಜ್ಯ ವಿಲೇವಾರಿ ಪದ್ಧತಿಗಳು. ಮತ್ತು ಮುಚ್ಚಿಹೋದ ಚರಂಡಿಗಳು, ಸರಿಯಾದ ನೈರ್ಮಲ್ಯ ಕೊರತೆ, ಮತ್ತು ದುರ್ಬಲ ತ್ಯಾಜ್ಯ ವಿಲೇವಾರಿ ವ್ಯವಸ್ಥೆಗಳು ನಗರದ ನೈರ್ಮಲ್ಯವನ್ನು ಹದಗೆಡಲು ಕಾರಣಗಲಾಗಿವೆ ಎಂದು ಹೇಳಬಹುದು.

ಇದರ ಕುರಿತಂತೆ ಮಾಜಿ ಇನ್ಫೋಸಿಸ್ ಸಿಎಫ್‌ಒ ಟಿ. ವಿ. ಮೋಹನ್‌ದಾಸ್ ಪೈ (Infosys CFO T. V. Mohandas Pai) ಅವರಂತಹ ಪ್ರಮುಖ ವ್ಯಕ್ತಿಗಳು ಬೆಂಗಳೂರಿನ ಈ ಶ್ರೇಯಾಂಕದ ಬಗ್ಗೆ “ಭಯಾನಕ ಆಡಳಿತ” (Terrible Governance) ಎಂದು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.

ವರದಿಯ ಪ್ರಕಾರ, ಸಣ್ಣ ಪಟ್ಟಣಗಳು ಮತ್ತು ನಗರಗಳಾದ ಇಂದೋರ್, ಸೂರತ್, ಮತ್ತು ನವಿ ಮುಂಬೈ (Indore, Surat, and Navi Mumbai) ಅತ್ಯುತ್ತಮ ಕಾರ್ಯಕ್ಷಮತೆಯನ್ನು ಮುಂದುವರಿಸಿವೆ. ಇದು ದೊಡ್ಡ ಬಜೆಟ್‌ಗಳು ಮತ್ತು ಮಹಾನಗರದ ಸ್ಥಾನಮಾನಕ್ಕಿಂತ ಪರಿಣಾಮಕಾರಿ ಆಡಳಿತ ಮತ್ತು ನಾಗರಿಕರ ಸಹಭಾಗಿತ್ವವು ಸ್ವಚ್ಛ ನಗರವನ್ನು ನಿರ್ಮಿಸಲು ಮುಖ್ಯ ಎಂದು ಸಾಬೀತುಪಡಿಸಿದೆ.

Shorts Shorts