ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಂಚಾರ ನಿರ್ವಹಣೆ (Traffic Management) ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಲೋಕಸಭಾ ಸಂಸದರಾದ ರಾಜೀವ್ ರೈ (RajeevRai) ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ (@CMofKarnataka) ಅವರಿಗೆ ನೇರವಾಗಿ ಟ್ವೀಟ್ ಮೂಲಕ ದೂರು ನೀಡಿದ್ದಾರೆ.
ಕ್ಷಮಿಸಿ ಮುಖ್ಯಮಂತ್ರಿಗಳೇ (CMofKarnataka), ಆದರೆ ನಿಮ್ಮಲ್ಲಿ ಅತ್ಯಂತ ಕಳಪೆ ಟ್ರಾಫಿಕ್ ನಿರ್ವಹಣೆ (Worst Traffic Management) ಇದೆ. ಕಳೆದ ಒಂದು ಗಂಟೆಯಿಂದ ನಾವು ರಾಜಕುಮಾರ್ ಸಮಾಧಿ ರಸ್ತೆಯಲ್ಲಿ (Rajkumar Samadhi Road) ಒಂದೇ ಸ್ಥಳದಲ್ಲಿ ಸಿಲುಕಿಕೊಂಡಿದ್ದೇವೆ. ನಾಳೆ ನಾನು ಸಂಸತ್ ಅಧಿವೇಶನಕ್ಕೆ (Parliament Session) ಹಾಜರಾಗಬೇಕಿದೆ, ಆದರೆ ಈ ಟ್ರಾಫಿಕ್ ಸಮಸ್ಯೆಯಿಂದ ಫ್ಲೈಟ್ ಮಿಸ್ ಆಗುವ ಸಂಭವ ಎದುರಾಗಿದೆ.
ಇಲ್ಲಿನ ಟ್ರಾಫಿಕ್ ಪೊಲೀಸರು ಅತ್ಯಂತ ಬೇಜವಾಬ್ದಾರಿ, ನಿಷ್ಪ್ರಯೋಜಕರು. ಅವರು ಕರೆಗಳನ್ನೂ ಸ್ವೀಕರಿಸುವುದಿಲ್ಲ. ನಾನು ಕರೆ ಮಾಡಲು ಪ್ರಯತ್ನಿಸಿದ ಸ್ಕ್ರೀನ್‌ಶಾಟ್ ಇಲ್ಲಿದೆ, ಅವರಲ್ಲಿ ಯಾರೂ ನನ್ನ ಕರೆಯನ್ನು ಸ್ವೀಕರಿಸಿಲ್ಲ. ಸುತ್ತಮುತ್ತ ಒಬ್ಬನೇ ಒಬ್ಬ ಪೊಲೀಸರೂ ಕಾಣಿಸುತ್ತಿಲ್ಲ.
ಈ ನಿಷ್ಪರಿಣಾಮಕಾರಿ ಅಧಿಕಾರಿಗಳು ಈ ಸುಂದರ ನಗರದ ಕೀರ್ತಿ ಮತ್ತು ಆಕರ್ಷಣೆಯನ್ನು ಹಾಳುಮಾಡಲು ಸಾಕು. ಬೆಂಗಳೂರಿನ ಟ್ರಾಫಿಕ್ ಈಗ ಅತ್ಯಂತ ಕುಖ್ಯಾತ ಟ್ರಾಫಿಕ್ ಎಂಬ ಖ್ಯಾತಿಯನ್ನು ಪಡೆದಿರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.
ಹಾಗೂ ಇದೇ ವೇಳೆ ಸಂಸದರು ತಮ್ಮ ಟ್ವೀಟ್‌ನಲ್ಲಿ ಬೆಂಗಳೂರು ಪೊಲೀಸ್ ಕಮಿಷನರ್ (CPBlr) ಮತ್ತು ಜಂಟಿ ಕಮಿಷನರ್ (ಸಂಚಾರ) (Jointcptraffic) ಅವರನ್ನೂ ಟ್ಯಾಗ್ ಮಾಡಿದ್ದಾರೆ.






