ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KIAL) ಟರ್ಮಿನಲ್ 1 ರಲ್ಲಿರುವ ಜನಪ್ರಿಯ ರಾಮೇಶ್ವರಂ ಕೆಫೆಯ (Rameshwaram Cafe) ಮಾಲೀಕರು ಮತ್ತು ಪ್ರತಿನಿಧಿಯ ವಿರುದ್ಧ ಬೆಂಗಳೂರು ಪೊಲೀಸರು ಎಫ್ ಐ ಆರ್ (FIR) ದಾಖಲಿಸಿಕೊಂಡಿದ್ದಾರೆ.
ಭಾರತೀಯ ನ್ಯಾಯ ಸಂಹಿತೆ (BNS) ಕಾಯಿದೆಯ ಸೆಕ್ಷನ್‌ಗಳಾದ 61, 123, 217, 228, 229, 274, ಮತ್ತು 275 ಅಡಿಯಲ್ಲಿ ಸುಮಂತ್ ಬಿ.ಎಲ್. (Sumanth B. L.) (ಪ್ರತಿನಿಧಿ), ದಿವ್ಯಾ ರಾಘವೇಂದ್ರ ರಾವ್(Divya Raghavendra Rao), ಮತ್ತು ರಾಘವೇಂದ್ರ ರಾವ್ (Raghavendra Rao)ಮಾಲೀಕರ ವಿರಿದ್ಧಎಫ್‌ಐಆರ್ ದಾಖಲಾಗಿದೆ. ಈ ಸೆಕ್ಷನ್‌ಗಳು ಹಾನಿಕಾರಕ ಆಹಾರ ಮಾರಾಟ, ಸುಳ್ಳು ಮಾಹಿತಿ ನೀಡುವಿಕೆ, ಮಾನನಷ್ಟ, ಮತ್ತು ಕ್ರಿಮಿನಲ್ ಪಿತೂರಿ ಸೇರಿದಂತೆ ಹಲವು ಅಪರಾಧಗಳಿಗೆ ಸಂಬಂಧಿಸಿವೆ.
ನಿಖಿಲ್ (Nikhil) ಎಂಬ ಗ್ರಾಹಕರು ಇದೇ ಜುಲೈ 24, 2025 ರಂದು ಬೆಳಗ್ಗೆ 7:42 ರ ಸುಮಾರಿಗೆ, ಗುವಾಹಟಿಗೆ ವಿಮಾನ ಹತ್ತುವ ಮೊದಲು ಕೆಫೆಗೆ ಭೇಟಿ ನೀಡಿ, ಪೊಂಗಲ್ ಮತ್ತು ಫಿಲ್ಟರ್ ಕಾಫಿ ಆರ್ಡರ್ ಮಾಡಿದ್ದರು. ಆಗ ಅವರು ಪೊಂಗಲ್‌ನಲ್ಲಿ ಹುಳು ಇರುವುದು ಕಂಡು ಬಂದ ಹಿನ್ನಲೆಯಲ್ಲಿ ಕೆಫೆ ಸಿಬ್ಬಂದಿ ಅವರ ಗಮನಕ್ಕೆ ತಂದಿದ್ದರು.ಈ ವೇಳೆ ಕೆಫೆ ಸಿಬ್ಬಂದಿ ಆಹಾರವನ್ನು ಬದಲಾಯಿಸುವುದಾಗಿ ಹೇಳಿದರೂ, ವಿಮಾನದ ಸಮಯ ಹತ್ತಿರವಿದ್ದ ಕಾರಣ ಬೇರೆ ಫುಡ್ ಬೇಡ ಎಂದು ನಿಖಿಲ್ 8:45ಕ್ಕೆ ವಿಮಾನ ನಿಲ್ದಾಣದಿಂದ ತೆರಳಿದ್ದನು.
ಮರುದಿನ, ಜುಲೈ 25 ರಂದು, ಕೆಫೆಯ ಪ್ರತಿನಿಧಿ ಸುಮಂತ್ ಬಿ.ಎಲ್. (A1) ಅವರು ತಮ್ಮ ವಿರುದ್ಧ ಸುಳ್ಳು ದೂರು ನೀಡಿದ್ದು, ಅದರಲ್ಲಿ ನಿಖಿಲ್ ಅವರು ಕೆಫೆಯ ಬ್ರ್ಯಾಂಡ್‌ಗೆ ಧಕ್ಕೆ ತರುವುದಾಗಿ ಬೆದರಿಕೆ ಹಾಕಿ ₹25 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿತ್ತು.
ಆದರೆ ನಾನು ಯಾವುದೇ ಹಣಕಾಸಿನ ಬೇಡಿಕೆ ಇಟ್ಟಿರುವುದನ್ನು ಅಥವಾ ಹಣ ಮರುಪಾವತಿ ಕೇಳಿರುವುದನ್ನೂ ಒಪ್ಪಿಕೊಳ್ಳುವುದಿಲ್ಲ. ಕೆಫೆ ದೂರು ನೀಡಿದ ಸಮಯದಲ್ಲಿ ತಾವು ವಿಮಾನದಲ್ಲಿದ್ದ ಕುರಿತು ಹಾಗೂ ವಿಮಾನ ದಾಖಲೆಗಳು (Flight Records) ಸಾಕ್ಷ್ಯ ನೀಡುತ್ತವೆ, ಹೀಗಾಗಿ ಕೆಫೆಯ ಆರೋಪಗಳು ಸುಳ್ಳು. ಹಾಗೂ ಕಲುಷಿತ ಆಹಾರ ನೀಡುವುದು ಗಂಭೀರ ಸುರಕ್ಷತಾ ಉಲ್ಲಂಘನೆಯಾಗಿದ್ದು, ಕೆಫೆ ಮಾಲೀಕರು ತಮ್ಮ ವಿರುದ್ಧ ಮಾನನಷ್ಟ ಮತ್ತು ಕಿರುಕುಳ ನೀಡುವ ಉದ್ದೇಶದಿಂದ ನಿಖಿಲ್ ಅವರು ಪ್ರತಿ-ದೂರು (Counter-complaint) ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರು ಇದೀಗ ಕೆಫೆಯ ಸಿಸಿಟಿವಿ ದೃಶ್ಯಾವಳಿಗಳು (CCTV footage)ಮತ್ತು ದೂರುದಾರರ ಪ್ರಯಾಣ ದಾಖಲೆಗಳನ್ನು ಪರಿಶೀಲಿಸಿ ಸತ್ಯಾಂಶವನ್ನು ಹೊರತರಲು ತನಿಖೆ ಆರಂಭಿಸಿದ್ದಾರೆ.






