Home State Politics National More
STATE NEWS

Bengaluru Airportನಲ್ಲಿ ಹೊಸ ರೂಲ್ಸ್: ಡಿಸೆಂಬರ್ 8 ರಿಂದ ‘ಪಿಕ್ ಅಪ್ & ಡ್ರಾಪ್’ಗೆ ನಿರ್ದಿಷ್ಟ ಸಮಯ ನಿಗದಿ

Kempegowda International Airport
Posted By: Meghana Gowda
Updated on: Dec 2, 2025 | 9:23 AM

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport)ದ ಟರ್ಮಿನಲ್ 1 ಮತ್ತು 2 ರ ಬಳಿ (Terminal 1 and 2) ಉಂಟಾಗುತ್ತಿರುವ ವಿಪರೀತ ಟ್ರಾಫಿಕ್ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಅನಧಿಕೃತ ಪಾರ್ಕಿಂಗ್ ತಡೆಗಟ್ಟಲು ವಿಮಾನ ನಿಲ್ದಾಣದ ಆಡಳಿತವು ಡಿಸೆಂಬರ್ 8 ರಿಂದ ಹೊಸ ಮತ್ತು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸುತ್ತಿದೆ.

 ವಾಹನ ನಿಲುಗಡೆಗೆ ಹೊಸ ಸಮಯ ಮತ್ತು ದಂಡ:

ಪಿಕ್ ಅಪ್ (Pick up) ಮತ್ತು ಡ್ರಾಪ್ (Drop) ಮಾಡಲು ಬರುವ ಖಾಸಗಿ ವಾಹನಗಳಿಗೆ (ವೈಟ್ ಬೋರ್ಡ್) ನಿರ್ದಿಷ್ಟ ಸಮಯ ನಿಗದಿಪಡಿಸಲಾಗಿದೆ.

ವಾಹನ ನಿಲುಗಡೆ ಅವಧಿ ಶುಲ್ಕ (ದಂಡ) ಕ್ರಮ
ಗರಿಷ್ಠ 8 ನಿಮಿಷಗಳು ಉಚಿತ
8 ರಿಂದ 13 ನಿಮಿಷಗಳು ₹150/- ಶುಲ್ಕ
13 ರಿಂದ 18 ನಿಮಿಷಗಳು ₹300/- ಶುಲ್ಕ
18 ನಿಮಿಷಗಳಿಗಿಂತ ಹೆಚ್ಚು ಟೋಯಿಂಗ್ (ಹತ್ತಿರದ ಪೊಲೀಸ್ ಠಾಣೆಗೆ)

ಟ್ಯಾಕ್ಸಿಗಳಿಗೂ ಅನ್ವಯ:

ಹಳದಿ ಬೋರ್ಡ್ ಟ್ಯಾಕ್ಸಿ (Yellow Board Taxi) ಮತ್ತು ಎಲೆಕ್ಟ್ರಿಕ್ ಕ್ಯಾಬ್‌ಗಳು (Electric Cabs) ನಿಗದಿಪಡಿಸಿದ ಪಾರ್ಕಿಂಗ್ ವಲಯಗಳಲ್ಲಿ ಮಾತ್ರ ಕಾಯಬೇಕು. ಈ ಟ್ಯಾಕ್ಸಿಗಳಿಗೆ ಕೇವಲ 10 ನಿಮಿಷಗಳ ಕಾಲ ಮಾತ್ರ ಉಚಿತ ಪಾರ್ಕಿಂಗ್ ಮಾಡಲು ಅವಕಾಶವಿದೆ.

ಈ ಹೊಸ ನಿಯಮಗಳನ್ನು ಪಾಲಿಸದಿರುವ ವಾಹನ ಬಳಕೆದಾರರಿಂದಾಗಿ ಏರ್‌ಪೋರ್ಟ್ ಬಳಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು, ಖಾಸಗಿ ವಾಹನಗಳು ಮತ್ತು ಕ್ಯಾಬ್‌ಗಳು ಹೆಚ್ಚು ಸಮಯ ಅನಧಿಕೃತವಾಗಿ ನಿಲ್ಲುತ್ತಿರುವುದು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

Shorts Shorts