ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah) ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (Deputy Chief Minister D.K. Shivakumar) ನಡುವೆ ನಡೆದ ಎರಡು ಸುತ್ತಿನ ಬ್ರೇಕ್‌ಫಾಸ್ಟ್ ಸಭೆಗಳನ್ನು ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R. Ashoka) ಅವರು ತೀವ್ರವಾಗಿ ಲೇವಡಿ ಮಾಡಿದ್ದಾರೆ. ಈ ಸಭೆಗಳು ಕೇವಲ ಒಗ್ಗಟ್ಟು ಪ್ರದರ್ಶಿಸುವ ನಾಟಕ ಎಂದು ಅವರು ಆರೋಪಿಸಿದ್ದಾರೆ.
ಈಗ ಆಗ್ತಿರೋದು ಕೇವಲ ಸಿನಿಮಾ ಇಂಟರ್‌ವೆಲ್ ಅಷ್ಟೇ. ಬ್ರೇಕ್‌ಫಾಸ್ಟ್ ಮೀಟಿಂಗ್ ಇರುವುದು ಬರಿ ಇಂಟರ್‌ವೆಲ್ ಅಷ್ಟೆ, ಮುಂದೆ ಬೇರೆಯೇ ಇದೆ.
ಬ್ರೇಕ್‌ಫಾಸ್ಟ್ ಸಭೆಯ ಡೈರೆಕ್ಷನ್ (Direction) ಅನ್ನು ಸೋನಿಯಾ ಗಾಂಧಿ, ಕಥೆಯನ್ನು (Story) ರಾಹುಲ್ ಗಾಂಧಿ (Rahul Gandhi) ಹಾಗೂ ಸಂಭಾಷಣೆಯನ್ನು (Dialogue) ಕೆ.ಸಿ. ವೇಣುಗೋಪಾಲ್ (K.C. Venugopal) ಅವರು ಸೇರಿಕೊಂಡು ಮಾಡಿದ್ದಾರೆ. ಸಿಎಂ ಹೇಗೆ ಮಾತಾಡೋಕು, ಡಿಸಿಎಂ ಹೇಗೆ ಮಾತಾಡೋಕು, ಎಲ್ಲವನ್ನೂ ಹೈಕಮಾಂಡ್ ಬರೆದುಕೊಟ್ಟು ಹೇಳಿಸಿದ್ದಾರೆ ಎಂದು ಅವರು ಕಿಡಿ ಕಾರಿದ್ದಾರೆ,
ಡಿಸೆಂಬರ್ 8 ರಿಂದ ವಿಧಾನಸಭೆ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ಪ್ರಶ್ನೆಗಳನ್ನು ಎದುರಿಸಲು ಈ ಬ್ರೇಕ್‌ಫಾಸ್ಟ್ ಮೀಟಿಂಗ್ ಕೇವಲ ಸಿದ್ಧತೆಯ ಭಾಗವಷ್ಟೇ ಇದು. ಇವರ ನಡುವಿನ ಜಗಳ ಟ್ವಿಟರ್ (X) ನಲ್ಲೂ ಬಂದಿದೆ ಹಾಗೂ ಸಿಎಂ-ಡಿಸಿಎಂ ನಡುವೆ ಇರುವ ಭಿನ್ನಾಭಿಪ್ರಾಯಗಳು ಇನ್ನೂ ಬಗೆಹರಿದಿಲ್ಲ ಎಂದು ಹೇಳಿದರು.






