Home State Politics National More
STATE NEWS

ಹಸಿರು ಸಾರಿಗೆಗೆ ಗ್ರೀನ್ ಸಿಗ್ನಲ್ | ಕೇಂದ್ರ ಸರ್ಕಾರಿಂದ ಕರ್ನಾಟಕಕ್ಕೆ 6,862 ಎಲೆಕ್ಟ್ರಿಕ್ ಬಸ್‌ಗಳ ನಿಯೋಜನೆ

Electric Buses
Posted By: Meghana Gowda
Updated on: Dec 3, 2025 | 4:26 AM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಇಡೀ ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ಬಸ್‌ಗಳ (Electric Buses) ನಿಯೋಜನೆಯನ್ನು ಹೆಚ್ಚಿಸಿದೆ. ಲೋಕಸಭೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ (Bengaluru South MP Tejasvi Surya) ಅವರು ಈ ಕುರಿತು ಪ್ರಶ್ನೆ ಎತ್ತಿದಾಗ, ಕೇಂದ್ರ ಬೃಹತ್ ಕೈಗಾರಿಕೆಗಳ ರಾಜ್ಯ ಖಾತೆ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮಾ (Bhupathiraju Srinivasa Varma) ಅವರು ಈ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ.

ಕೇಂದ್ರದ ಪ್ರಮುಖ ಯೋಜನೆಗಳಾದ FAME-2 ಮತ್ತು ಪಿ.ಎಂ. ಇ-ಡ್ರೈವ್ (PM e-Drive) ಅಡಿಯಲ್ಲಿ ಕರ್ನಾಟಕಕ್ಕೆ ಬೃಹತ್ ಪ್ರಮಾಣದಲ್ಲಿ ಇವಿ ಬಸ್‌ಗಳನ್ನು ನಿಯೋಜಿಸಲಾಗಿದೆ.

ಯೋಜನೆ ಒಟ್ಟು ನಿಯೋಜಿತ ಬಸ್‌ಗಳು ಬೆಂಗಳೂರಿಗೆ (BMTC) ಹಂಚಿಕೆ ನೀಡಿದ ಅನುದಾನ
FAME-2 ಯೋಜನೆ 6,862 ಬಸ್‌ಗಳು 1,221 ಬಸ್‌ಗಳು ₹517.23 ಕೋಟಿ
ಪಿ.ಎಂ. ಇ-ಡ್ರೈವ್ (ಒಟ್ಟು) 13,800 ಬಸ್‌ಗಳು
ಪಿ.ಎಂ. ಇ-ಡ್ರೈವ್ (ಹಂತ 1) 10,900 ಬಸ್‌ಗಳು 4,500 ಬಸ್‌ಗಳು

 ಬೆಂಗಳೂರಿನ ಸಾರಿಗೆ ವ್ಯವಸ್ಥೆಗೆ ಉತ್ತೇಜನ:

FAME-2 ಯೋಜನೆಯಡಿ ಬೆಂಗಳೂರಿನ ಬಿಎಂಟಿಸಿ (BMTC) ಗೆ 1,221 ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸಲಾಗಿದೆ. ಅಲ್ಲದೆ, ಪಿ.ಎಂ. ಇ-ಡ್ರೈವ್ ಯೋಜನೆಯ ಮೊದಲ ಹಂತದ 10,900 ಬಸ್‌ಗಳ ಹಂಚಿಕೆಯಲ್ಲಿ ಬೆಂಗಳೂರು ನಗರಕ್ಕೆ ಬರೋಬ್ಬರಿ 4,500 ಇ-ಬಸ್‌ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಇದು ನಗರದ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ವಾಯುಮಾಲಿನ್ಯವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ನೀಡಿರುವ ಮಹತ್ವದ ಕೊಡುಗೆಯಾಗಿದೆ.

Shorts Shorts