ಬೆಂಗಳೂರು: ನಟ ದರ್ಶನ್ (Darshan) ಮನೆಯಲ್ಲಿ ಸೀಜ್ ಮಾಡಿದ್ದ 82 ಲಕ್ಷ ರೂಪಾಯಿ (₹82 lakh cash) ಹಣವನ್ನು ಆದಾಯ ತೆರಿಗೆ ಇಲಾಖೆ (IT Department) ಸುಪರ್ದಿಗೆ ನೀಡುವಂತೆ ಕೋರ್ಟ್ ಆದೇಶ ನೀಡಿದೆ.
ನಟ ದರ್ಶನ್ ಅವರ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದ 82 ಲಕ್ಷ ರೂಪಾಯಿ ನಗದು ಹಣವನ್ನು ತಮ್ಮ ವಶಕ್ಕೆ ನೀಡುವಂತೆ ಆದಾಯ ತೆರಿಗೆ ಇಲಾಖೆ (Income Tax Department) ಕೋರ್ಟ್‌ಗೆ ಮನವಿ ಮಾಡಿತ್ತು. ಆದಾಯ ತೆರಿಗೆ ಇಲಾಖೆಯ ಅರ್ಜಿಯನ್ನು ಪುರಸ್ಕರಿಸಿದ ಸೆಷನ್ಸ್ ಕೋರ್ಟ್ (Sessions Court), ವಶಕ್ಕೆ ಪಡೆದಿದ್ದ ₹82 ಲಕ್ಷ ಹಣವನ್ನು ಐಟಿ ಇಲಾಖೆಗೆ (IT Department) ನೀಡುವಂತೆ ಆದೇಶಿಸಿದೆ.
ಈ ಹಣವನ್ನು ಪೊಲೀಸರು ನಟ ದರ್ಶನ್ ಅವರ ವಶದಿಂದ ಪಡೆದುಕೊಂಡಿದ್ದರು. ಈಗ, ತೆರಿಗೆ ವಿಚಾರಣೆಗೆ ಸಂಬಂಧಿಸಿದಂತೆ ಈ ಹಣವನ್ನು ತಮ್ಮ ವಶಕ್ಕೆ ಪಡೆಯಲು ಐಟಿ ಇಲಾಖೆ ಯಶಸ್ವಿಯಾಗಿದ್ದು, ಇದು ದರ್ಶನ್ ಅವರಿಗೆ ದೊಡ್ಡ ಮಟ್ಟದ ಶಾಕ್ ನೀಡಿದೆ.






