ವಿಜಯಪುರ: ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ಇಂದು (ಬುಧವಾರ) ಬೆಳಗ್ಗೆ ಒಂದೂವರೆ ವರ್ಷದ ಗಂಡು ಮಗುವಿನ (Boy Baby) ಕಳ್ಳತನ(Kidnapping) ಆಗಿರುವ ಘಟನೆ ನಡೆದಿದೆ. ಮಗುವನ್ನು ಅಪರಿಚಿತ ಮಹಿಳೆಯೊಬ್ಬರು ಎತ್ತಿಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.
ಚಡಚಣ ಪಟ್ಟಣದ ಶಿವಾಜಿ ನಗರದಲ್ಲಿ(Shivaji Nagar) ಇಂದು ಬೆಳಿಗ್ಗೆ ಸುಮಾರು 7 ಗಂಟೆ ಸುಮಾರಿಗೆ ಈ ಕೃತ್ಯ ನಡೆದಿದೆ. ಕಳ್ಳತನವಾದ ಮಗುವನ್ನು ಮೊಹಮ್ಮದ್ ಮಾಜ್ ಚಾಂದಶೇಖ್(Mohammed Maaz Chandashekh) (ಒಂದೂವರೆ ವರ್ಷ) ಎಂದು ಗುರುತಿಸಲಾಗಿದೆ.
ಮಗು ಮನೆಯ ಎದುರಿನಲ್ಲಿ ಆಟವಾಡುತ್ತಿದ್ದಾಗ, ನೀಲಿ ಸೀರೆ ಧರಿಸಿದ್ದ ಅಪರಿಚಿತ ಮಹಿಳೆಯೊಬ್ಬರು ಬಂದು ಮಗುವನ್ನು ಎತ್ತಿಕೊಂಡು ಹೋಗಿದ್ದಾರೆ ಎಂದು ಮಗುವಿನ ತಂದೆ ಚಾಂದಶೇಖ್ (Chandashekh) ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೃತ್ಯ ನಡೆದ ಕೂಡಲೇ ಮಗುವಿನ ಪೋಷಕರು ಚಡಚಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ತಕ್ಷಣವೇ ವಿವಿಧ ರಸ್ತೆಗಳಿಗೆ ನಾಕಾಬಂಧಿ (Naka Bandi) ಹಾಕಿ ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ.






