ರಾಮನಗರ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (Deputy Chief Minister D.K. Shivakumar) ಅವರ ತವರು ಜಿಲ್ಲೆ ರಾಮನಗರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ (corruption) ಆರೋಪಗಳು ಕೇಳಿಬಂದಿವೆ. ಮರ ಸಾಗಣೆಗೆ ‘ಮಂತ್ಲಿ ಫಿಕ್ಸ್’ (monthly fix) ಹೆಸರಿನಲ್ಲಿ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ದೂರು ದಾಖಲಾಗಿದೆ.
ಮರ ಸಾಗಿಸುವ ಪ್ರತಿ ವಾಹನಕ್ಕೆ ಪ್ರತಿ ತಿಂಗಳು ₹5000 ಲಂಚ ನೀಡುವಂತೆ ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ವಾಹನಗಳ ತಪಾಸಣೆ ಮತ್ತು ಹಣ ವಸೂಲಿಗಾಗಿ, ನಿಷೇಧವಿದ್ದರೂ ಸಹ ಅಧಿಕಾರಿಗಳು ಬೈಕ್‌ನಲ್ಲಿ ಸುತ್ತಾಡುತ್ತಿದ್ದಾರೆ. ಈ ವೇಳೆ ತಿಂಗಳ ಮಾಮೂಲಿ ಕೊಡದಿದ್ದರೆ, ವಾಹನಗಳ ಮೇಲೆ ದಾಳಿ ಮಾಡಿ ಚಾಲಕರ ವಿರುದ್ಧ ಕೇಸ್ ದಾಖಲಿಸುತ್ತಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ದೂರುದಾರರು ರಾಮನಗರ ವಲಯ ಅರಣ್ಯಾಧಿಕಾರಿ ರಾಜಶೇಖರ್ (Rajashekhar) ಹಾಗೂ ಯುವ ರಕ್ಷಣಾ ಸಮಿತಿ ಅಧ್ಯಕ್ಷ ಕುಮಾರ್ (Kumar) ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.






