ಬೆಂಗಳೂರು: ರಾಜ್ಯಗಳ ಪೈಕಿ ವಿದೇಶಿ ನೇರ ಬಂಡವಾಳವನ್ನು ಆಕರ್ಷಿಸುವಲ್ಲಿ ಕರ್ನಾಟಕ (Karnataka) ಎರಡನೇ ಅತಿದೊಡ್ಡ ರಾಜ್ಯವಾಗಿ ಹೊರಹೊಮ್ಮಿದೆ. ಮಹಾರಾಷ್ಟ್ರ ರಾಜ್ಯಕ್ಕೆ $10.57 ಬಿಲಿಯನ್ ಡಾಲರ್ (10.57 Billion USD) ಬಂಡವಾಳ ಹೂಡಿಕೆಯೊಂದಿಗೆ ದೇಶದಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಕರ್ನಾಟಕ ರಾಜ್ಯವು $9.4 ಬಿಲಿಯನ್ ಡಾಲರ್ (9.4 Billion USD) ಬಂಡವಾಳವನ್ನು ಆಕರ್ಷಿಸಿ, ಮಹಾರಾಷ್ಟ್ರದ ನಂತರ 2ನೇ ಸ್ಥಾನ ಪಡೆದುಕೊಂಡಿದೆ.
ಕರ್ನಾಟಕವು ಈ ಮೂಲಕ ತಮಿಳುನಾಡು (Tamil Nadu), ಗುಜರಾತ್ (Gujarat) ಮತ್ತು ದೆಹಲಿ (Delhi) ಯಂತಹ ಪ್ರಮುಖ ರಾಜ್ಯಗಳನ್ನು ಹಿಂದಿಕ್ಕಿ ಗಮನಾರ್ಹ ಸಾಧನೆ ಮಾಡಿದೆ.
ಭಾರತದ ಆರ್ಥಿಕತೆಗೆ FDI ಬಲ
ಭಾರತವು (India) ಪ್ರಸಕ್ತ ಹಣಕಾಸು ವರ್ಷದ (FY 2025-26) ಮೊದಲ ಆರು ತಿಂಗಳುಗಳಲ್ಲಿ (ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ) ಬೃಹತ್ ಪ್ರಮಾಣದ ವಿದೇಶಿ ನೇರ ಬಂಡವಾಳವನ್ನು (Foreign Direct Investment – FDI) ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.
ಈ ಆರು ತಿಂಗಳ ಅವಧಿಯಲ್ಲಿ ಭಾರತಕ್ಕೆ ಒಟ್ಟು $35.18 ಬಿಲಿಯನ್ ಡಾಲರ್ (35.18 Billion USD) ವಿದೇಶಿ ನೇರ ಬಂಡವಾಳ ಹರಿದು ಬಂದಿದೆ. ಇದು ಭಾರತದ ರೂಪಾಯಿ ಲೆಕ್ಕದಲ್ಲಿ ಅಂದಾಜು ₹3.15 ಲಕ್ಷ ಕೋಟಿ (₹3.15 Lakh Crore) ಯಷ್ಟಿದೆ.
ಕಳೆದ ಹಣಕಾಸು ವರ್ಷದ (Previous Fiscal Year) ಇದೇ ಅವಧಿಗೆ ಹೋಲಿಸಿದರೆ, ಈ ಬಾರಿ ಹರಿದು ಬಂದಿರುವ ವಿದೇಶಿ ಬಂಡವಾಳದಲ್ಲಿ ಶೇ. 18 ರಷ್ಟು (18%) ಏರಿಕೆ ಕಂಡಿದೆ.






