ಬೆಂಗಳೂರು: ಇಂಡಿಗೋ ಏರ್‌ಲೈನ್ಸ್‌ನ (IndiGo Airlines) ವಿಮಾನಗಳ (Flights) ಹಾರಾಟದಲ್ಲಿ ಉಂಟಾಗಿರುವ ವ್ಯತ್ಯಯ (Disruption)ದಿಂದಾಗಿ ಇದೀಗ ಒಂದು ಕುಟುಂಬದ ಮದುವೆಗೆ (Wedding) ವಿಘ್ನ ಎದುರಾಗುವ ಆತಂಕ ಮನೆ ಮಾಡಿದೆ.
ವರ, ವರನ ತಂದೆ ಮಹೇಂದ್ರ ಕುಮಾರ್ (Mahendra Kumar) ಹಾಗೂ ಕುಟುಂಬದವರು ಬೆಂಗಳೂರಿನಿಂದ ಒರಿಸ್ಸಾದ ಭುವನೇಶ್ವರಕ್ಕೆ (Bhubaneswar) ಮಗನ ಮದುವೆಗೆಂದು ನಾಳೆ (ಶುಕ್ರವಾರ) ಬೆಳಿಗ್ಗೆ 07:30ರ ವಿಮಾನದಲ್ಲಿ ಪ್ರಯಾಣಿಸಲು 110 ಟಿಕೆಟ್‌ಗಳನ್ನು (Tickets) ಬುಕ್ ಮಾಡಿದ್ದರು. ಒಂದು ಟಿಕೆಟ್‌ಗೆ ₹7,000 ರಂತೆ ಒಟ್ಟು ₹7.7 ಲಕ್ಷ (₹7.7 Lakh) ಖರ್ಚು ಮಾಡಿದ್ದರು.
ಆದರೆ ಇಂಡಿಗೋ ಏರ್‌ಲೈನ್ಸ್‌ನ ಎಟವಟ್ಟಿನಿಂದ, ವರ ಬೆಂಗಳೂರಿನಲ್ಲಿದ್ದರೆ, ವಧು ಭುವನೇಶ್ವರದಲ್ಲಿದ್ದಾರೆ. ಆದರೆ, ವಿಮಾನ ರದ್ದಿನಿಂದಾಗಿ ರಸ್ತೆಯ ಮೂಲಕ ತಲುಪಲು ಸಾಧ್ಯವಿಲ್ಲದೆ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport – KIA) ವರನ ತಂದೆ ಬೆಳಗ್ಗೆಯಿಂದಲೇ ಬೀಡು ಬಿಟ್ಟು ಪರದಾಡುತ್ತಿದ್ದಾರೆ.
ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಆಕ್ರೋಶ:
ವಿಮಾನಗಳ ಹಾರಾಟ ರದ್ದಾಗಿರುವ ಹಿನ್ನೆಲೆಯಲ್ಲಿ, ನಾಳೆ ವಿಮಾನ ಹಾರಾಟದ ಬಗ್ಗೆ ಯಾವುದೇ ಖಚಿತ ಮಾಹಿತಿ (No Confirmation) ನೀಡಲು ಏರ್‌ಲೈನ್ಸ್ ಸಿಬ್ಬಂದಿ ನಿರಾಕರಿಸಿದ್ದಾರೆ. ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ (Negligence) ಮಹೇಂದ್ರ ಕುಮಾರ್ ಮತ್ತು ಕುಟುಂಬಸ್ಥರು ತೀವ್ರ ಆಕ್ರೋಶ (Anger) ವ್ಯಕ್ತಪಡಿಸಿದ್ದಾರೆ.
ಈ ಕಾರಣದಿಂದಾಗಿ, ವರ ಮತ್ತು ಕುಟುಂಬಸ್ಥರಲ್ಲಿ ಮದುವೆಗೆ ಹೋಗಲು ಸಾಧ್ಯವಾಗದಿರುವ ಭೀತಿ ಮನೆ ಮಾಡಿದ್ದು, ಶೀಘ್ರವೇ ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಆಗ್ರಹಿಸಿದ್ದಾರೆ.






