ಚಿತ್ರದುರ್ಗ: ಚಿತ್ರದುರ್ಗದ (Chitradurga) ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು (Murugha Shri) ಎದುರಿಸುತ್ತಿದ್ದ ಪೋ*ಕ್ಸೋ (POC*O) ಪ್ರಕರಣವೊಂದರಲ್ಲಿ ಅವರು ಖುಲಾಸೆಗೊಂಡಿರುವ ಸತ್ಯಾಂಶ ಬಹಿರಂಗವಾಗಿದೆ. ಪ್ರಕರಣದ ತೀರ್ಪಿನ ಪ್ರತಿ ಲಭ್ಯವಾಗಿದ್ದು, ಮುರುಘಾಶ್ರೀಗಳು ನಿರಪರಾಧಿ ಎಂದು ಘೋಷಿಸಲು ಕಾರಣವಾದ ಸ್ಪೋಟಕ ಅಂಶವೊಂದು ಜಡ್ಜ್‌ಮೆಂಟ್‌ನಲ್ಲಿ ಉಲ್ಲೇಖವಾಗಿದೆ.
ಈ ಪೋಕ್ಸೋ ಪ್ರಕರಣದಲ್ಲಿ ಮುರುಘಾಶ್ರೀಗಳ ಖುಲಾಸೆಗೆ ಚಿತ್ರದುರ್ಗದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಸಿ. ಹಡಪದ (Judge G.C. Hadapada) ಅವರು ನೀಡಿದ ತೀರ್ಪು ಕಾರಣವಾಗಿದೆ.
ಪ್ರಕರಣದ ಎರಡನೇ ಸಂತ್ರಸ್ತೆಗೆ ಸಂಬಂಧಿಸಿದ ಚಾರ್ಜ್‌ಶೀಟ್‌ನಲ್ಲಿ(charge sheet), ಅತ್ಯಾ*ರವು 2022ರ ಜುಲೈ 24 ರಂದು ನಡೆದಿದೆ ಎಂದು ಉಲ್ಲೇಖಿಸಲಾಗಿತ್ತು. ಈ ಚಾರ್ಜ್‌ಶೀಟ್ ಆಧಾರಿಸಿ ಮುರುಘಾಶ್ರೀಗಳ ಪರ ವಕೀಲರು ಪ್ರಬಲ ವಾದ ಮಂಡಿಸಿದರು. ಅತ್ಯಾಚಾರ ನಡೆದಿದೆ ಎನ್ನಲಾದ ದಿನಾಂಕದಂದು (ಜುಲೈ 24, 2022) ಮುರುಘಾಶ್ರೀಗಳು ದೇಶದಲ್ಲೇ ಇರಲಿಲ್ಲ, ಬದಲಾಗಿ ಅಮೆರಿಕ ಸೇರಿದಂತೆ ವಿವಿಧ ವಿದೇಶಗಳಲ್ಲಿ ಪ್ರವಾಸದಲ್ಲಿದ್ದರು ಎಂದು ನ್ಯಾಯಾಲಯಕ್ಕೆ ಸಾಕ್ಷ್ಯಗಳ ಸಮೇತ ತಿಳಿಸಿದರು. ಸಂತ್ರಸ್ತೆಯ ಹೇಳಿಕೆಗಳು ಮತ್ತು ಪ್ರಾಸಿಕ್ಯೂಷನ್ ಸಲ್ಲಿಸಿದ ಸಾಕ್ಷ್ಯಗಳು ಸಂಶಯಾಸ್ಪದವಾಗಿವೆ (ಸಂಸಯಾಸ್ಪದ ಸಾಕ್ಷಿ) ಎಂದು ನ್ಯಾಯಾಲಯ ಪರಿಗಣಿಸಿದೆ.
ಈ ಪೋಕ್ಸೋ ಪ್ರಕರಣದಲ್ಲಿ ಪೊಲೀಸರು ಎ (A) ಮತ್ತು ಬಿ (B) ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದ್ದರು. ಎರಡನೇ ಸಂತ್ರಸ್ತೆಯ ಚಾರ್ಜ್‌ಶೀಟ್ ಆಧಾರದ ಮೇಲೆ ವಿಚಾರಣೆ ನಡೆಸಿದ ನ್ಯಾಯಾಲಯವು ಮುರುಘಾಶ್ರೀಗಳನ್ನು ಈ ಪ್ರಕರಣದಿಂದ ಖುಲಾಸೆಗೊಳಿಸಿ ತೀರ್ಪು ನೀಡಿದೆ.






