ಬೆಂಗಳೂರು: ರಾಜ್ಯದಲ್ಲಿ 63% ಭ್ರಷ್ಟಾಚಾರ ಸರ್ಕಾರವಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R. Ashoka) ಅವರು ಉಪಲೋಕಾಯುಕ್ತ ಜಸ್ಟೀಸ್ ಬಿ. ವೀರಪ್ಪ (Justice B. Veerappa) ಅವರ ಹೇಳಿಕೆಯನ್ನು ಪ್ರಸ್ತಾಪಿಸಿ ಮಾಡಿದ ಆರೋಪವು, ಈಗ ಅವರೇ ಮುಖಭಂಗಕ್ಕೆ (Embarrassment) ಒಳಗಾಗುವಂತೆ ಮಾಡಿದೆ. ಏಕೆಂದರೆ, ಉಪಲೋಕಾಯುಕ್ತರು ಉಲ್ಲೇಖಿಸಿದ ವರದಿ ಹೊರಬಿದ್ದಾಗ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದದ್ದು ಬಿಜೆಪಿ (BJP) ಸರ್ಕಾರ!
ಸಿಎಂ ಸಿದ್ದರಾಮಯ್ಯರ ಕೌಂಟರ್:
ಆರ್. ಅಶೋಕ್ ಅವರ ಆರೋಪಕ್ಕೆ ತಕ್ಷಣವೇ ತಿರುಗೇಟು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಟ್ವೀಟ್ (Tweet) ಮೂಲಕ ಕೌಂಟರ್ ನೀಡಿದ್ದಾರೆ. ಪಾಪ ಅಶೋಕ್ ಯಾವ ಕಾಲದ್ದು ಹೇಳಿದ್ರು ಅವ್ರೀಗೆ ಗೊತ್ತಿಲ್ಲ… ಅದು ಯಡಿಯೂರಪ್ಪ (B.S. Yediyurappa) ಅವರ ಕಾಲದ ಕಥೆ.
ಗೌರವಾನ್ವಿತ ಉಪಲೋಕಾಯುಕ್ತರಾದ ಬಿ.ವೀರಪ್ಪ ಅವರು ಇಂದು ಮಾತನಾಡಿರುವ ವರದಿಯು (ಟ್ರಾನ್ಸ್‌ಪರೆನ್ಸಿ ಇಂಡಿಯಾ ಇಂಟರ್ ನ್ಯಾಶನಲ್) 2019ರ ನವೆಂಬರ್‌ನಲ್ಲಿ ಬಂದಿದ್ದು. ಆ ವರದಿ ಹೊರಬರುವ ವೇಳೆಯಲ್ಲಿ ರಾಜ್ಯದಲ್ಲಿ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇತ್ತು. ಆರ್.ಅಶೋಕ್ ಅವರು ಉಪಲೋಕಾಯುಕ್ತರ ಮಾತನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಬಿಜೆಪಿಯ ಪಾಪದ ಗಂಟನ್ನು ನಮ್ಮ ತಲೆಗೆ ಕಟ್ಟಲು ಹೋಗಿ ತಮ್ಮ ಕಾಲ ಮೇಲೆ ತಾವೇ ಚಪ್ಪಡಿ ಎಳೆದುಕೊಂಡಿದ್ದಾರೆ ಎಂದು ಸಿಎಂ ಸಿದ್ದು ಹೇಳಿದ್ದಾರೆ.
ಡಿ.ಕೆ. ಶಿವಕುಮಾರ್ ಕೌಂಟರ್ :
ಇದೇ ವಿಚಾರವಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ಅವರು ಕೂಡ ಆರ್. ಅಶೋಕ್‌ರನ್ನು ತರಾಟೆಗೆ ತೆಗೆದುಕೊಂಡರು. ಅದು ಬಿಜೆಪಿಯ ಪಾಪದ ಗಂಟು! ಆರ್. ಅಶೋಕ್ ಅವರು ಯಾವ ಕಾಲದ ವರದಿಯನ್ನು ನಮ್ಮ ಸರ್ಕಾರಕ್ಕೆ ಅನ್ವಯಿಸಿ ಹೇಳುತ್ತಿದ್ದಾರೋ ಅವರಿಗೇ ಗೊತ್ತಿಲ್ಲ. ಅವರ ಮತಿಗೇಡಿತನಕ್ಕೆ ಏನೆನ್ನಬೇಕು?” ಎಂದು ವ್ಯಂಗ್ಯವಾಡಿದರು.
ನಮ್ಮ ಸರ್ಕಾರದಲ್ಲಿ ಎಲ್ಲವನ್ನೂ ಪಾರದರ್ಶಕವಾಗಿಸುವ (Transparent) ಪ್ರಯತ್ನ ಜಾರಿಯಲ್ಲಿದೆ. ಆರ್. ಅಶೋಕ್ ಅವರೇ, ನೀವು ಮಾಡಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಎರಡೂವರೆ ವರ್ಷದಲ್ಲಿ ಸ್ವಚ್ಚ ಮಾಡುವುದು ಅಸಾಧ್ಯ. ಸ್ವಲ್ಪ ಸಮಯ ಕೊಡಿ, ಎಲ್ಲವನ್ನೂ ಸರಿಪಡಿಸುತ್ತೇವೆ,” ಎಂದು ಸಿದ್ದರಾಮಯ್ಯನವರ ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಒಟ್ಟಾರೆ, ವಿಪಕ್ಷ ನಾಯಕ ಆರ್. ಅಶೋಕ್ ಅವರು ಆತುರದಲ್ಲಿ ನೀಡಿದ ಹೇಳಿಕೆ ಬಿಜೆಪಿ ಸರ್ಕಾರದ ಹಳೆಯ ಭ್ರಷ್ಟಾಚಾರದ ವರದಿಯೆಂಬುದು ಸ್ಪಷ್ಟವಾಗಿದ್ದು, ಅವರಿಗೆ ಮುಖಭಂಗವಾದಂತಾಗಿದೆ.






