ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ (Challenging Star Darshan) ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Case) ಆರೋಪದ ಮೇಲೆ ಜೈಲು (Jail) ಸೇರಿರುವಾಗಲೇ, ಅವರ ಬಹುನಿರೀಕ್ಷಿತ ಚಿತ್ರ ‘ಡೆವಿಲ್’ (Devil) ಚಿತ್ರದ ಟ್ರೈಲರ್ (Trailer) ಇಂದು ಬೆಳಗ್ಗೆ 10.5ಕ್ಕೆ ಅದ್ಧೂರಿಯಾಗಿ ಬಿಡುಗಡೆಯಾಗಿದೆ.
ಟ್ರೈಲರ್‌ನಲ್ಲಿ ದರ್ಶನ್ ಅವರ ಪವರ್‌ಫುಲ್ ಸಂಭಾಷಣೆಗಳು (Dialogues) ಅಭಿಮಾನಿಗಳಿಗೆ ಹುರುಪು ತುಂಬಿವೆ. ಅದರಲ್ಲೂ, “ಸೂರ್ಯಂಗೆ ಹೆಚ್ಚು ಹೊತ್ತು ಗ್ರಹಣ ಹಿಡಿಯಲ್ಲ. ನಾನು ಬರ್ತಿದೀನಿ ಚಿನ್ನ” ಎಂಬ ಡೈಲಾಗ್ ಪ್ರಸ್ತುತ ಪರಿಸ್ಥಿತಿಗೆ ತಳುಕು ಹಾಕಿದ್ದು, ತೀವ್ರ ಗಮನ ಸೆಳೆದಿದೆ.
ಚಿತ್ರದ ನಾಯಕಿ (Heroine) ಹೇಳುವ “ಕ್ಷಣಕ್ಕೊಂದು ಬಣ್ಣ (Colour), ಗಳಿಗೆಗೊಂದು ವೇಷ (Disguise)” ಎಂಬ ಸಂಭಾಷಣೆಯೂ ಟ್ರೈಲರ್‌ನ ಪ್ರಮುಖ ಹೈಲೈಟ್ ಆಗಿ ಸದ್ದು ಮಾಡುತ್ತಿದೆ.
ನಟ ದರ್ಶನ್ ಅವರು ಸದ್ಯ ನ್ಯಾಯಾಂಗ ಬಂಧನದಲ್ಲಿ (Judicial Custody) ಇರುವ ಸಂದರ್ಭದಲ್ಲಿಯೇ ಚಿತ್ರತಂಡ ಟ್ರೈಲರ್ ಬಿಡುಗಡೆ ಮಾಡಿದ್ದು, ಇದು ದರ್ಶನ್ ಅವರ ಅಭಿಮಾನಿಗಳಿಗೆ (Fans) ಸಿಕ್ಕ ದೊಡ್ಡ ಗಿಫ್ಟ್ ಎಂದು ಹೇಳಿದರೆ ತಪ್ಪಾಗದು. ದರ್ಶನ್ ಅವರ ಹೊಸ ಆಕ್ಷನ್ (Action) ಲುಕ್‌ಗೆ ಸೋಷಿಯಲ್ ಮೀಡಿಯಾದಲ್ಲಿ (Social Media) ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಡೆವಿಲ್’ ಸಿನಿಮಾದಲ್ಲಿ ದರ್ಶನ್ಗೆ ಜೊತೆಯಾಗಿ ರಚನಾ ರೈ ನಟಿಸಿದ್ದಾರೆ. ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್, ಶರ್ಮಿಳಾ ಮಾಂಡ್ರೆ, ಶೋಭರಾಜ್,ಬಿಗ್ಬಾಸ್ ವಿನಯ್ ಗೌಡ, ಗಿಲ್ಲಿ ನಟ ಮೊದಲಾದವರು ನಟಿಸಿದ್ದಾರೆ. ಪ್ರಕಾಶ್ ಹಾಗೂ ಜಯಮ್ಮ ಚಿತ್ರ ನಿರ್ಮಿಸಿದ್ದಾರೆ.






