ಧಾರವಾಡ: ಡಿವೈಡರ್‌ಗೆ (Divider) ಅತಿ ವೇಗದಲ್ಲಿ ಬಂದ ಕಾರು ಡಿಕ್ಕಿಯಾಗಿ (Car Collision), ಕ್ಷಣಾರ್ಧದಲ್ಲೇ ಬೆಂಕಿ ಹೊತ್ತಿಕೊಂಡು (Caught Fire) ಭಸ್ಮವಾದ ದಾರುಣ ಘಟನೆ ವರದಿಯಾಗಿದೆ. ಈ ಘಟನೆಯಲ್ಲಿ ಕಾರಿನಲ್ಲಿದ್ದ ಹಾವೇರಿ ಲೋಕಾಯುಕ್ತ ಇನ್‌ಸ್ಪೆಕ್ಟರ್ (Lokayukta Inspector) ಸ್ಥಳದಲ್ಲೇ ಸಜೀವ ದ*ಹನವಾಗಿದ್ದಾರೆ.
ಮೃತಪಟ್ಟವರು ಹಾವೇರಿ ಲೋಕಾಯುಕ್ತದಲ್ಲಿ ಇನ್‌ಸ್ಪೆಕ್ಟರ್ ಆಗಿದ್ದ ಸಾಲಿಮಠ ಅವರು. ಗದಗದಿಂದ (Gadag) ಹುಬ್ಬಳ್ಳಿ (Hubballi) ಮಾರ್ಗವಾಗಿ ಹೊರಟಿದ್ದ ಇವರ ಕಾರು, ಧಾರವಾಡ (Dharwad) ಜಿಲ್ಲೆಯ ಅಣ್ಣಿಗೇರಿ (Annigeri) ಸಮೀಪದ ಭದ್ರಾಪುರ ಬಳಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯಾದ ರಭಸಕ್ಕೆ ಕಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ಇನ್‌ಸ್ಪೆಕ್ಟರ್ ಸಾಲಿಮಠ ಅವರು ಹೊರಬರಲು ಸಾಧ್ಯವಾಗದೆ ಕಾರಿನ ಒಳಗೆಯೇ ಸಿಲುಕಿ ಸುಟ್ಟು ಕರಕಲಾಗಿ (Burned to Ashes) ದಾರುಣ ಅಂತ್ಯ ಕಂಡಿದ್ದಾರೆ.
ಮೃತದೇಹವು ಗುರುತು ಸಿಗಲಾರದಷ್ಟು ಸುಟ್ಟು ಹೋಗಿದ್ದು, ಮರಣೋತ್ತರ ಪರೀಕ್ಷೆಗಾಗಿ (Post-mortem) ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ (KIMS Hospital, Hubballi) ರವಾನಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ, ಈ ಘಟನೆಯು ರಾತ್ರಿ ವೇಳೆಯಲ್ಲಿ ಅತಿ ವೇಗದಿಂದ ಸಂಭವಿಸಿದ ಅಪಘಾತ ಎಂದು ತಿಳಿದುಬಂದಿದ್ದು, ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






