ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ (Kadur Taluk) ಸಖರಾಯಪಟ್ಟಣದಲ್ಲಿ (Sakharayapatna) ನಡೆದ ಎರಡು ಗುಂಪುಗಳ ಮಾರಾಮಾರಿಯಲ್ಲಿ (Clash), ಕಾಂಗ್ರೆಸ್ (Congress) ಪಕ್ಷದ ಗ್ರಾಪಂ ಸದಸ್ಯನನ್ನು ಮಚ್ಚಿನಿಂದ (Machete) ಕೊಚ್ಚಿ ಕೊಲೆಗೈ*ದ (Brutal Murder) ದಾರುಣ ಘಟನೆ ವರದಿಯಾಗಿದೆ.
ಗಣೇಶ್ (Ganesh) (38) ಮೃತ ದುರ್ದೈವಿ. ಇವರು ಮುಂಬರುವ ಜಿಲ್ಲಾ ಪಂಚಾಯಿತಿ (Zilla Panchayat) ಚುನಾವಣೆಯಲ್ಲಿ ಸಖರಾಯಪಟ್ಟಣ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಶುಕ್ರವಾರ ರಾತ್ರಿ ಸುಮಾರು 10:30ರ ಸುಮಾರಿಗೆ ಸಖರಾಯಪಟ್ಟಣದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ (Clash) ಶುರುವಾಗಿದೆ. ಕೊಲೆಗೂ ಮುನ್ನ ಸಖರಾಯಪಟ್ಟಣದ ಬಾರ್ (Bar) ಬಳಿ ಗಲಾಟೆಯಾಗಿತ್ತು. ಅದರ ಅರ್ಧ ಗಂಟೆಯ ನಂತರ, ಸಖರಾಯಪಟ್ಟಣದ ಸಮೀಪದ ಕಲ್ಮುರುಡೇಶ್ವರ ಮಠದ (Kalmurudeshwara Math) ಬಳಿ ಮಾರಾಮಾರಿ ನಡೆದು ಕೊಲೆಯಾಗಿದೆ.
ಈ ಮಾರಾಮಾರಿಯಲ್ಲಿ ಎದುರಾಳಿ ಗುಂಪಿನ ಇಬ್ಬರ ತಲೆಗೂ ಗಂಭೀರ ಗಾಯಗಳಾಗಿದ್ದು (Severe Injuries), ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ (Sakharayapatna Police Station) ಪ್ರಕರಣ (Case) ದಾಖಲಾಗಿದ್ದು, ಪೊಲೀಸರು ತನಿಖೆ (Investigation) ಮುಂದುವರಿಸಿದ್ದಾರೆ.






