ಉತ್ತರ ಕನ್ನಡ: ಜೈಲಿನೊಳಗೆ ಮಾದಕ ವಸ್ತುಗಳ (Narcotic Substances) ಸಾಗಣೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಿದ (Ban) ಹಿನ್ನೆಲೆಯಲ್ಲಿ, ಕಾರವಾರ ಜಿಲ್ಲಾ ಕಾರಾಗೃಹದಲ್ಲಿ (Karwar District Jail) ಜೈಲರ್ ಸೇರಿದಂತೆ ಮೂವರು ಸಿಬ್ಬಂದಿಗಳ ಮೇಲೆ ರೌಡಿಗಳ (Rowdies) ಗುಂಪೊಂದು ಮಾರಣಾಂತಿಕ ಹ*ಲ್ಲೆ (Brutal Assault) ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ.
ಹಲ್ಲೆ ನಡೆಸಿದವರು ಮಂಗಳೂರು (Mangaluru) ಮೂಲದ ರೌಡಿಗಳಾದ ಮೊಹ್ಮದ್ ಅಬ್ದುಲ್ ಫಯಾನ್ ಮತ್ತು ಕೌಶಿಕ ನಿಹಾಲ್ ಎಂದು ಗುರುತಿಸಲಾಗಿದೆ. ಈ ರೌಡಿಗಳ ವಿರುದ್ಧ ಡಕಾಯತಿ (Dacoity) ಸೇರಿದಂತೆ 12ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಜೈಲರ್ ಕಲ್ಲಪ್ಪ ಗಸ್ತಿ ಸೇರಿದಂತೆ ಒಟ್ಟು ಮೂವರು ಸಿಬ್ಬಂದಿಗಳ ಮೇಲೆ ಹಲ್ಲೆಯಾಗಿದೆ. ಹಲ್ಲೆ ಮಾಡಿದ ರೌಡಿಗಳು ಜೈಲರ್ ಮತ್ತು ಸಿಬ್ಬಂದಿಯ ಬಟ್ಟೆ ಹರಿದು ಹಾಕಿ ಹಲ್ಲೆ ಮಾಡಿದ್ದಾರೆ.
ಮಂಗಳೂರು ಜೈಲಿನಲ್ಲಿ ಹೆಚ್ಚುವರಿಯಾಗಿದ್ದ ಕಾರಣ ಈ ಆರೋಪಿಗಳನ್ನು ಕಾರವಾರ ಜೈಲಿಗೆ ಶಿಫ್ಟ್ (Shift) ಮಾಡಲಾಗಿತ್ತು. ಕಳೆದ ಕೆಲವು ದಿನಗಳಿಂದ ಜೈಲಿನಲ್ಲಿ ಮಾದಕ ಪದಾರ್ಥಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಿದ್ದರಿಂದ ಆರೋಪಿಗಳು ಜೈಲರ್ ಜೊತೆ ಗಲಾಟೆ ಮಾಡಿದ್ದರು. ಇದಕ್ಕೆ ಜೈಲರ್ ಒಪ್ಪದ ಕಾರಣ ಈ ಮಾರಣಾಂತಿಕ ಹಲ್ಲೆ ನಡೆದಿದೆ.
ಹಲ್ಲೆಗೊಳಗಾದ ಜೈಲರ್ ಮತ್ತು ಸಿಬ್ಬಂದಿಯನ್ನು ತಕ್ಷಣವೇ ಕಾರವಾರದ ಆಸ್ಪತ್ರೆಗೆ (Karwar Hospital) ದಾಖಲಿಸಲಾಗಿದೆ. ಘಟನೆ ಕುರಿತು ಕಾರವಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.






