Home State Politics National More
STATE NEWS

Heart Attack | ಜಿಮ್​ನಲ್ಲಿ ವರ್ಕ್‌ಔಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಯುವಕ ಸಾ*ವು!

Heart Attack, Gym Death, (1)
Posted By: Meghana Gowda
Updated on: Dec 6, 2025 | 6:52 AM

ಕೊಪ್ಪಳ: ಜಿಮ್‌ನಲ್ಲಿ(Gym) ವರ್ಕ್ ಔಟ್‌ ಮಾಡುತ್ತಿದ್ದಾಗ ಯುವಕನೊಬ್ಬನಿಗೆ ಹೃದಯಾಘಾತವಾಗಿ (Heart Attack) ಸಾವ*ನ್ನಪ್ಪಿರುವ ದುರಂತ ಘಟನೆ ಕೊಪ್ಪಳದಲ್ಲಿ ಕಂಡು ಬಂದಿದೆ.

ಮೃತಪಟ್ಟ ಯುವಕನನ್ನು ಸಂದೇಶ್ (Sandesh) (28) ಎಂದು ಗುರುತಿಸಲಾಗಿದೆ. ಹೋಟೆಲ್ ಉದ್ಯಮ (Hotel Business) ನಡೆಸುತ್ತಿದ್ದರು.

ಜಿಮ್‌ನಲ್ಲಿ ವರ್ಕ್ ಔಟ್‌ ಮಾಡುತ್ತಿರುವಾಗಲೇ  ತೀವ್ರ ಎದೆನೋವು (Chest Pain) ಕಾಣಿಸಿಕೊಂಡಿದೆ. ತಕ್ಷಣವೇ ಜಿಮ್‌ನಿಂದ ಆತನನ್ನು ಖಾಸಗಿ ಆಸ್ಪತ್ರೆಗೆ (Private Hospital) ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ (Treatment Failed) ಸಂದೇಶ್ ಕೊನೆಯುಸಿರೆಳೆದಿದ್ದಾರೆ.

ಇತ್ತೀಚೆಗೆ ಯುವಜನರಲ್ಲಿ ಜಿಮ್ ಮತ್ತು ವ್ಯಾಯಾಮದ (Exercise) ನಂತರ ಹೃದಯಾಘಾತದಿಂದ ಸಾವನ್ನಪ್ಪುವ ಪ್ರಕರಣಗಳು ಹೆಚ್ಚುತ್ತಿದ್ದು, ಇದು ಆತಂಕಕ್ಕೆ ಕಾರಣವಾಗಿದೆ.

Shorts Shorts