Home State Politics National More
STATE NEWS

IndiGo Airlinesನಿಂದ ಪ್ರಯಾಣಿಕರಿಗೆ ನರಕ! ನೀರಿಲ್ಲ, ಊಟವಿಲ್ಲ- ಗಾಯಕಿ ಅನನ್ಯ ಪ್ರಕಾಶ್ ಕಣ್ಣೀರು

Ananya Prakash (1)
Posted By: Meghana Gowda
Updated on: Dec 6, 2025 | 3:55 AM

ಬೆಂಗಳೂರು: ದೇಶಾದ್ಯಂತ ಇಂಡಿಗೋ ವಿಮಾನಯಾನ ಸಂಸ್ಥೆಯು (IndiGo) ಎದುರಿಸುತ್ತಿರುವ ವಿಮಾನ ರದ್ದತಿ (Flight Cancellation) ಮತ್ತು ವಿಳಂಬದ (Delay) ‘ಗೋಳು’ ಈಗ ಗಾಯಕಿ ಅನನ್ಯ ಪ್ರಕಾಶ್ (Ananya Prakash) ಅವರಿಗೂ ತಟ್ಟಿದೆ. ಇದರಿಂದ ಕಂಗಾಲಾದ ಅವರು ಸಾಮಾಜಿಕ ಜಾಲತಾಣಗಳಲ್ಲಿ (Social Media) ಕಣ್ಣೀರು ಹಾಕಿದ್ದು, ಇತರ ಪ್ರಯಾಣಿಕರಿಗೆ (Passengers) ಯಾರು ಕೂಡ ಪ್ರಯಾಣ ಮಾಡದಂತೆ ಮನವಿ ಮಾಡಿದ್ದಾರೆ.

ಅನನ್ಯ ಪ್ರಕಾಶ್ ಅವರು ಬೆಂಗಳೂರಿನಿಂದ ಹೈದ್ರಾಬಾದ್​ಗೆ (Bengaluru to Hyderabad) ಪ್ರಯಾಣಿಸಬೇಕಿತ್ತು. ಆದರೆ ವಿಮಾನ ರದ್ದಾದ ಕಾರಣ ಅವರು ಭಾರಿ ಸಮಸ್ಯೆ ಎದುರಿಸಿದ್ದು, ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

ಏರ್‌ಲೈನ್ಸ್‌ನವರು ಪ್ರಯಾಣಿಕರನ್ನು ಕೇವಲವಾಗಿ ನೋಡುತ್ತಿದ್ದಾರೆ. ಊಟವಿಲ್ಲದೇ, ನೀರಿಲ್ಲದೇ ಮಕ್ಕಳು ಮತ್ತು ಹೆಣ್ಮಕ್ಕಳು ಒದ್ದಾಡುತ್ತಿದ್ದಾರೆ. ಮಲಗುವುದಕ್ಕೂ ಜಾಗವಿಲ್ಲದೇ ರಾತ್ರಿ ಇಡೀ ವಿಮಾನಕ್ಕೆ ಕಾಯುತ್ತಿದ್ದಾರೆ. ವಿಮಾನ ರದ್ದಾದ ನಂತರ ತಮ್ಮ ಬ್ಯಾಗೇಜ್ (Baggage) ವಾಪಸ್ ಕೇಳಿದರೆ, “ವೈಟ್ ಮಾಡಿ” ಎಂದು ಹೇಳಿದ ಸಿಬ್ಬಂದಿ, ನಂತರ ಇನ್ನು ಎರಡು ದಿನಗಳಾಗಬಹುದು ಎಂದು ಹೇಳಿದ್ದಾರೆ. ಸಂಜೆ 7 ಗಂಟೆಯೊಳಗೆ ಹೈದ್ರಾಬಾದ್​​ನಲ್ಲಿರಬೇಕು ಎಂದು ಹೇಳಿದರೂ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ ಎಂದು ಅನನ್ಯ ಪ್ರಕಾಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂಡಿಗೋ ಪ್ರಯಾಣಿಕರಿಗೆ ಮನವಿ:

ತಮಗೆ ಆದ ತೊಂದರೆಯಿಂದ ಆಘಾತಕ್ಕೊಳಗಾದ ಅನನ್ಯ ಪ್ರಕಾಶ್ ಅವರು, ಇಂಡಿಗೋ ಫ್ಲೈಟ್ ಬುಕ್ ಮಾಡಿರುವವರಿಗೆ ಕಣ್ಣೀರಿ ಹಾಕುತ್ತಾ, ದಯವಿಟ್ಟು ಯಾರೂ  ನಂಬಿಕೊಳ್ಳಬೇಡಿ. ಈ ಕೂಡಲೇ ನಿಮ್ಮ ಟಿಕೆಟ್ ಕ್ಯಾನ್ಸಲ್ (Cancel) ಮಾಡಿಕೊಳ್ಳಿ. ಅಲ್ಲಿಗೆ (ಏರ್‌ಪೋರ್ಟ್‌ಗೆ) ಹೋಗಿ ಸಮಸ್ಯೆಯಾಗುವುದು ಬೇಡ. ದಯವಿಟ್ಟು ನಿಮ್ಮ ಅಮೂಲ್ಯ ಸಮಯವನ್ನು (Time) ವ್ಯರ್ಥ ಮಾಡಿಕೊಳ್ಳದೇ ಈಗಲೇ ಪರ್ಯಾಯ ಪ್ಲ್ಯಾನ್ (Alternate Plan) ಮಾಡಿಕೊಳ್ಳಿ ಎಂದು ಹೇಳಿದ್ದಾರೆ.

Shorts Shorts