Home State Politics National More
STATE NEWS

New Year High Alert | ದೆಹಲಿ ಬ್ಲಾಸ್ಟ್ ಹಿನ್ನೆಲೆ ಬೆಂಗಳೂರಲ್ಲಿ ಪೊಲೀಸ್ ಸರ್ಪಗಾವಲು..!

New year
Posted By: Meghana Gowda
Updated on: Dec 6, 2025 | 5:41 AM

ಬೆಂಗಳೂರು: ಹೊಸ ವರ್ಷಾಚರಣೆ (New Year) ಸಮೀಪಿಸುತ್ತಿದ್ದಂತೆ, ಬೆಂಗಳೂರು ನಗರದಲ್ಲಿ (Bengaluru City) ಹೈ ಅಲರ್ಟ್ (High Alert) ಘೋಷಿಸಲಾಗಿದೆ. ದೆಹಲಿ (Delhi) ಬ್ಲಾಸ್ಟ್ (Blast) ಘಟನೆಯ ಹಿನ್ನೆಲೆಯಲ್ಲಿ ಈ ಬಾರಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ನಗರದಾದ್ಯಂತ ಪೊಲೀಸರ (Police) ಸರ್ಪಗಾವಲು (Vigilance) ಇರಲಿದ್ದು, ಬಂದೋಬಸ್ತ್ ಹೆಚ್ಚಿಸಲು ಪೊಲೀಸ್ ಕಮಿಷನರ್ (Police Commissioner) ಸೂಚನೆ ನೀಡಿದ್ದಾರೆ.

ಎಂ.ಜಿ. ರೋಡ್ (MG Road), ಇಂದಿರಾನಗರ (Indiranagar), ಕೋರಮಂಗಲ (Koramangala) ಮತ್ತು ಮಾರತ್ತಹಳ್ಳಿ (Marathahalli) ಸೇರಿದಂತೆ ಜನರು ಸೇರುವ ಎಲ್ಲಾ ಸೂಕ್ಷ್ಮ ಪ್ರದೇಶಗಳಲ್ಲಿ ಖಾಕಿ ಕಣ್ಗಾವಲು ಇರಲಿದೆ.  ನಗರದಾದ್ಯಂತ 2 ಸಾವಿರಕ್ಕೂ ಹೆಚ್ಚು ಪೊಲೀಸರ (More than 2000 Police) ನಿಯೋಜನೆಗೆ ನಿರ್ಧಾರ ಕೈಗೊಳ್ಳಲಾಗಿದೆ.

ವಿಶೇಷವಾಗಿ ಮಹಿಳೆಯರು ಮತ್ತು ಯುವತಿಯರ (Women and Girls) ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಇದಕ್ಕಾಗಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಪ್ಯಾಟ್ರೋಲ್ ವೆಹಿಕಲ್ (Patrol Vehicle) ಮತ್ತು ಚೀತಾ ಬೈಕ್ (Cheetah Bike) ಮೂಲಕ ನಿರಂತರವಾಗಿ ಮಾನಿಟರಿಂಗ್ (Monitoring) ಮಾಡಲಾಗುತ್ತದೆ. ಹಾಗೂ  ಸೂಕ್ಷ್ಮ ಪ್ರದೇಶಗಳಲ್ಲಿ ಜಿಬಿಎ (GBA) ಜೊತೆಗೆ ಸಿಸಿಟಿವಿ ಕ್ಯಾಮೆರಾಗಳನ್ನು (CCTV) ಅಳವಡಿಸಲು ನಿರ್ಧಾರ ಕೈಗೊಳ್ಳಲಾಗಿದೆ.

ಈ ಮೂಲಕ ಹೊಸ ವರ್ಷಾಚರಣೆಯನ್ನು ಶಾಂತಿಯುತವಾಗಿ, ಸುರಕ್ಷಿತವಾಗಿ ನೆರವೇರಿಸಲು ಬೆಂಗಳೂರು ಪೊಲೀಸರು ಬಿಗಿ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.

Shorts Shorts