ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿದ ಐಷಾರಾಮಿ ಮರ್ಸಿಡಿಸ್ ಬೆಂಜ್ (Mercedes Benz) ಕಾರು, ಕಟ್ಟಡಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಬದಿಯಲ್ಲಿದ್ದ ಎರಡು ಬೈಕ್‌ಗಳು (Bikes) ಮತ್ತು ಒಂದು ಕಾರು (Car) ಜಖಂಗೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬಸವನಗುಡಿ ಸಂಚಾರ ಠಾಣಾ (Basavanagudi Traffic Police) ವ್ಯಾಪ್ತಿಯ ವಾಸವಿ ರೋಡ್‌ನಲ್ಲಿ (Vasavi Road) ಈ ಅಪಘಾತ ಸಂಭವಿಸಿದೆ. ಛತ್ತೀಸ್‌ಘಡ್ (Chhattisgarh) ರಿಜಿಸ್ಟ್ರೇಷನ್ ನೊಂದಣಿ ಹೊಂದಿದ್ದ ಮರ್ಸಿಡಿಸ್ ಬೆಂಜ್ ಕಾರು ಅತಿವೇಗದಲ್ಲಿ (High Speed) ಬಂದಿದ್ದು, ನಿಯಂತ್ರಣ ಕಳೆದುಕೊಂಡು ಪಲ್ಟಿ ಹೊಡೆದು ಕಟ್ಟಡಕ್ಕೆ ಗುದ್ದಿದೆ.
ಡಿಕ್ಕಿಯಾದ ರಭಸಕ್ಕೆ ಕಾರು ಜಖಂ ಆಗಿದ್ದು, ಕಟ್ಟಡದ ಸಮೀಪ ಪಾರ್ಕ್ (Park) ಮಾಡಿದ್ದ ಎರಡು ಬೈಕ್‌ಗಳು ಮತ್ತು ಒಂದು ಕಾರು ಹಾನಿಗೀಡಾಗಿವೆ. ಕಾರಿನಲ್ಲಿ ಚಾಲಕ ಮಾತ್ರ ಇದ್ದು, ಆತ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾನೆ.
ಅಪಘಾತಕ್ಕೆ ಪ್ರಮುಖ ಕಾರಣ ಅತಿವೇಗ ಎಂದು ತಿಳಿದುಬಂದಿದ್ದು, ಚಾಲಕ ಡ್ರಂಕ್ ಅಂಡ್ ಡ್ರೈವ್ (Drunk and Drive) ಮಾಡಿದ್ದಾನೆಯೇ ಎಂಬ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿ ತನಿಖೆ ನಡೆಸುತ್ತಿದ್ದಾರೆ.






