ಕೇರಳ: ಕೇರಳದಲ್ಲಿ ಭಾರೀ ಸಂಚಲನ ಮೂಡಿಸಿದ್ದ ನಟಿಯೊಬ್ಬರ ಅಪಹರಣ ಮತ್ತು ಲೈಂಗಿ*ಕ ದೌರ್ಜನ್ಯ (Sexual Assault) ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ (Actor Dileep) ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಪ್ರಕರಣದ 8ನೇ ಆರೋಪಿಯಾಗಿದ್ದ ಮಲಯಾಳಂ ನಟ ದಿಲೀಪ್ (Dileep) ಅವರನ್ನು ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಲಯವು (Ernakulam Principal Sessions Court) ಎಲ್ಲಾ ಆರೋಪಗಳಿಂದ ಖುಲಾಸೆ ಗೊಳಿಸಿದೆ. ಪಿತೂರಿ ಆರೋಪವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಧೀಶರಾದ ಹನಿ ಎಂ. ವರ್ಗೀಸ್ (Honey M. Varghese) ಅವರು ತೀರ್ಪು ನೀಡಿದ್ದಾರೆ.
ಕಿಡ್ನಾಪ್ ಮತ್ತು ಲೈಂಗಿಕ ಕಿರುಕುಳವನ್ನು ನೇರವಾಗಿ ನಡೆಸಿದ ಮುಖ್ಯ ಆರೋಪಿ ‘ಪಲ್ಸರ್ ಸುನಿ’ (Pulsar Suni) ಸೇರಿದಂತೆ 1 ರಿಂದ 6 ನೇ ಆರೋಪಿಗಳನ್ನು ನ್ಯಾಯಾಲಯವು ತಪ್ಪಿತಸ್ಥರು ಎಂದು ಘೋಷಿಸಿದೆ. ಅವರ ವಿರುದ್ಧ ಗ್ಯಾಂಗ್ ರೇಪ್ (Gang Rape) ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಆರೋಪ ಸಾಬೀತಾಗಿದೆ.
ತಪ್ಪಿತಸ್ಥರೆಂದು ಸಾಬೀತಾದ ಆರು ಆರೋಪಿಗಳ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯವು ಡಿಸೆಂಬರ್ 12 ರಂದು ಪ್ರಕಟಿಸಲಿದೆ.
ಪ್ರಕರಣದ ಹಿನ್ನೆಲೆ :
2017ರ ಫೆಬ್ರವರಿ 17 ರಂದು ನಟಿಯೊಬ್ಬರನ್ನು ಚಲಿಸುತ್ತಿರುವ ಕಾರಿನಲ್ಲಿ ಅಪಹರಣ ಮಾಡಿ ಲೈಂಗಿಕ ಕಿರುಕುಳ ನೀಡಲಾಗಿತ್ತು. ದಿಲೀಪ್ ಮತ್ತು ನಟಿ ಮಂಜು ವಾರಿಯರ್ (Manju Warrier) ಅವರೊಂದಿಗಿನ ವೈಯಕ್ತಿಕ ಸಂಬಂಧದ ಬಗ್ಗೆ ಸಂತ್ರಸ್ತ ನಟಿ ದಿಲೀಪ್ ಅವರ ಮೊದಲ ಪತ್ನಿ ಮಂಜು ಅವರಿಗೆ ಮಾಹಿತಿ ನೀಡಿದ್ದರು.
ಇದರಿಂದ ವೈಯಕ್ತಿಕ ಸೇಡು ತೀರಿಸಿಕೊಳ್ಳಲು , ದಿಲೀಪ್ ಅವರು ಪಿತೂರಿ ನಡೆಸಿ, ನಟಿಯನ್ನು ಕಿಡ್ನಾಪ್ ಮಾಡಿಸಿ ಲೈಂಗಿಕ ದೌರ್ಜನ್ಯ ನಡೆಸಲು ಗ್ಯಾಂಗ್‌ಗೆ ಹಣ ನೀಡಿದ್ದರು ಎಂಬುದು ಪ್ರಾಸಿಕ್ಯೂಷನ್‌ನ ಮುಖ್ಯ ವಾದವಾಗಿತ್ತು. ಹಾಗೂ ದಿಲೀಪ್ ವಿರುದ್ಧ ಸಾಕ್ಷ್ಯನಾಶದ (Destroying Evidence) ಆರೋಪವೂ ದಾಖಲಾಗಿತ್ತು.






