Home State Politics National More
STATE NEWS

Silicon City ಹುಡುಗಿಯರೇ ಎಚ್ಚರ! ಬಣ್ಣ ಬಣ್ಣದ ಮೆಸೇಜ್‌ಗಳ ಮೂಲಕ ಹಣ ಪೀಕುವ ಖದೀಮರಿದ್ದಾರೆ

Sanjaya
Posted By: Meghana Gowda
Updated on: Dec 8, 2025 | 4:32 AM

ಬೆಂಗಳೂರು : ಬೆಂಗಳೂರಿನಲ್ಲಿ (Bengaluru) ಯುವತಿಯರನ್ನು ಹಾಗೂ ಯುವಕರನ್ನು ಸಾಮಾಜಿಕ ಜಾಲತಾಣಗಳಲ್ಲಿ (Social Media) ಬಲೆಗೆ ಬೀಳಿಸಿ, ಬಣ್ಣ ಬಣ್ಣದ ಮೆಸೇಜ್‌ಗಳ ಮೂಲಕ ಮೋಸ ಮಾಡಿ ಹಣ ಪೀಕುತ್ತಿದ್ದ ಸಂಜಯ್ ರಾವ್ (Sanjay Rao) ಎಂಬಾತನ ಘನಂದಾರಿ ಕೆಲಸ ಇದೀಗ ಬಯಲಾಗಿದೆ.

ಖಾಸಗಿ ಕಂಪನಿಯೊಂದರಲ್ಲಿ ಆಫೀಸ್ ಬಾಯ್ (Office Boy) ಆಗಿ ಕೆಲಸ ಮಾಡುತ್ತಿದ್ದ ಸಂಜಯ್, ತಾನೊಬ್ಬ ದೊಡ್ಡ ಟ್ರಾವೆಲ್ ಏಜೆನ್ಸಿಯ ಸಿಇಒ (Travel Agency CEO) ಎಂದು ಬಿಲ್ಡಪ್ ಕೊಡುತ್ತಿದ್ದ.

ಸೋಶಿಯಲ್ ಮೀಡಿಯಾದಲ್ಲಿ (ಮುಖ್ಯವಾಗಿ ಎಕ್ಸ್ / X ನಲ್ಲಿ) ಚೆಂದದ ಹುಡುಗಿಯರಿಗೆ ರಿಕ್ವೆಸ್ಟ್ ಕಳಿಸಿ, ಫ್ರೆಂಡ್ ಆಗುತ್ತಿದ್ದ. ಬಳಿಕ ಮೆಸೇಜ್ ಮೇಲೆ ಮೆಸೇಜ್ ಮಾಡಿ ತಾನೊಬ್ಬ ಒಳ್ಳೆಯ ವ್ಯಕ್ತಿ ಎಂದು ಬಿಂಬಿಸುತ್ತಿದ್ದ. ಪರಿಚಯ ಗಟ್ಟಿಯಾಗುತ್ತಿದ್ದಂತೆ, ಅನುಕೂಲವಾದ ಸಮಯ ನೋಡಿ ಸ್ಕ್ಯಾನರ್ (QR Code) ಕಳುಹಿಸಿ ಅಥವಾ ಖಾತೆಯ ವಿವರಗಳನ್ನು ನೀಡಿ ಹಣಕ್ಕಾಗಿ ಕೇಳುತ್ತಿದ್ದ.

₹100 ರಿಂದ ಸಾವಿರಾರು ರೂ. ವರೆಗೆ ಹಣವನ್ನು ಪೀಕುತ್ತಿದ್ದ ಸಂಜಯ್, ಹಣ ಅಕೌಂಟ್‌ಗೆ ಬಿದ್ದ ಕೂಡಲೇ ತನ್ನ ವರಸೆ ಬದಲಾಯಿಸುತ್ತಿದ್ದ. ಹಣವನ್ನು ವಾಪಸ್ ಕೇಳಿದರೆ, ನೇರವಾಗಿ ಅಕೌಂಟ್‌ಗಳನ್ನು ಬ್ಲಾಕ್ ಮಾಡುತ್ತಿದ್ದ.

ದೂರು ನೀಡಲು ಹಿಂಜರಿಕೆ:

ಸಂಜಯ್, ಹಣದ ಮೊತ್ತ ಕಮ್ಮಿ ಇರುವುದರಿಂದ ಮೋಸ ಹೋದವರು ದೂರು ನೀಡಲು (File a Complaint) ಹಿಂದು ಮುಂದು ನೋಡುತ್ತಾರೆ ಎಂಬುದನ್ನೇ ಅಡ್ವಾಂಟೇಜ್ ಮಾಡಿಕೊಂಡು ದಿನೇ ದಿನೇ ವಂಚನೆ ಮುಂದುವರಿಸುತ್ತಿದ್ದ. ಈ ರೀತಿ ಸುಮಾರು 10ಕ್ಕೂ ಹೆಚ್ಚು ಹುಡುಗಿಯರಿಗೆ ಹಾಗೂ ಕೆಲವು ಹುಡುಗರಿಗೂ ಮೋಸ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

Shorts Shorts