ಬೆಂಗಳೂರು: ಕಳೆದ ಮೇ 19, 2024 ರಂದು ಬೆಂಗಳೂರಿನ ಹೆಬ್ಬಗೋಡಿಯ ಜಿ.ಆರ್. ಫಾರ್ಮ್ಸ್‌ನಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್ ಸಿನಿಮಾ ನಟಿ ಕೊಲ್ಲ ಹೇಮಾ (Kollu Hema) ಅವರಿಗೆ ಹೈಕೋರ್ಟ್‌ನಲ್ಲಿ (High Court) ದೊಡ್ಡ ರಿಲೀಫ್ ದೊರೆತಿದೆ. ನಟಿ ಹೇಮಾ ವಿರುದ್ಧದ ಡ್ರಗ್ಸ್ ಸೇವನೆ ಪ್ರಕರಣವನ್ನು ಹೈಕೋರ್ಟ್ ಏಕಸದಸ್ಯ ಪೀಠವು ರದ್ದುಗೊಳಿಸಿ ಮಹತ್ವದ ಆದೇಶ ನೀಡಿದೆ.
ನಟಿ ಹೇಮಾ ಅವರ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್, ಆರೋಪ ಸಾಬೀತಿಗೆ ಸೂಕ್ತವಾದ ಕಾನೂನುಬದ್ಧ ಆಧಾರವಿಲ್ಲ ಎಂದು ಹೇಳಿ ಪ್ರಕರಣ ರದ್ದುಗೊಳಿಸಲು ಕೆಳಗಿನ ಪ್ರಮುಖ ಅಂಶಗಳನ್ನು ಉಲ್ಲೇಖಿಸಿದೆ:
ಡ್ರಗ್ಸ್ ಸೇವನೆಯನ್ನು ದೃಢಪಡಿಸುವ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟವಾದ ಮಾನದಂಡಗಳು (Standard Protocols) ಇನ್ನೂ ಲಭ್ಯವಿಲ್ಲ. ರಕ್ತ ಅಥವಾ ಮೂತ್ರ ಮಾದರಿಗಳನ್ನು ಪರೀಕ್ಷಿಸಲು ಕೇಂದ್ರ ಸರ್ಕಾರವು ಸ್ಟಾಂಡರ್ಡ್ ಪ್ರೊಟೊಕಾಲ್ (Standard Protocol) ರೂಪಿಸಿಲ್ಲ.
ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಫೋರೆನ್ಸಿಕ್ ಟೆಸ್ಟ್ (Forensic Test) ಸರಿಯಾದ ವಿಧಾನಗಳನ್ನು ಹೊಂದಿಲ್ಲ. ಹೀಗಾಗಿ, ಮಾನದಂಡವಿಲ್ಲದ ಈ ಪರೀಕ್ಷೆಗಳು ನ್ಯಾಯಾಲಯದಲ್ಲಿ ವಿಶ್ವಾಸಾರ್ಹವಲ್ಲ. ಕೇಂದ್ರ ಸರ್ಕಾರವು ಡ್ರಗ್ಸ್ ಟೆಸ್ಟಿಂಗ್‌ಗಾಗಿ ನ್ಯಾಷನಲ್ ನೊಡಲ್ ಡ್ರಗ್ಸ್ ಟೆಸ್ಟಿಂಗ್ ಲ್ಯಾಬೋರೇಟರಿ (National Nodal Drugs Testing Laboratory) ಅನ್ನು ನೇಮಿಸಿಲ್ಲ.
ಈ ಕಾರಣಗಳಿಂದಾಗಿ, ಆರೋಪಿ (ನಟಿ ಹೇಮಾ) ವಿರುದ್ಧ ಎನ್.ಡಿ.ಪಿ.ಎಸ್ (NDPS – Narcotic Drugs and Psychotropic Substances Act) ಕೇಸ್ ಮುಂದುವರಿಸಲು ಕಾನೂನುಬದ್ಧ ಆಧಾರವಿಲ್ಲ ಎಂದು ಹೈಕೋರ್ಟ್ ನಿರ್ಧರಿಸಿ ಪ್ರಕರಣವನ್ನು ರದ್ದುಗೊಳಿಸಿದೆ.
ನಟಿ ಹೇಮಾ ಕಣ್ಣೀರು
ಹೈಕೋರ್ಟ್‌ನಲ್ಲಿ ಕೇಸ್ ರದ್ದುಗೊಂಡ ಹಿನ್ನೆಲೆಯಲ್ಲಿ ನಟಿ ಕೊಲ್ಲ ಹೇಮಾ ಅವರು ವಿಡಿಯೋ ಮೂಲಕ ಕಣ್ಣೀರು ಹಾಕಿದ್ದಾರೆ. ಈ ಘಟನೆಯಿಂದ ಕುಗ್ಗಿ ತಮ್ಮ ತಾಯಿ ಸಾವನ್ನಪ್ಪಿದರು ಎಂದು ಹೇಳಿರುವ ಅವರು, ಈ ನೋವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಇದೀಗ ತೀರ್ಪಿನ ಸಕಾರಾತ್ಮಕ ವಿಚಾರವನ್ನು ಹಂಚಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಮೇ 19, 2024 ರಂದು ಸ್ನೇಹಿತ ವಾಸು ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ (Birthday Party) ನಟಿ ಹೇಮಾ ಭಾಗಿಯಾಗಿದ್ದರು. ಈ ವೇಳೆ ಪಾರ್ಟಿ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು (CCB Police), ಮಾದಕವಸ್ತು ಸೇವನೆ ಮತ್ತು ಶಾಂತಿಭಂಗ ಆರೋಪದ ಮೇಲೆ ನಟಿ ಹೇಮಾ ಸೇರಿ 88 ಮಂದಿಯನ್ನು ಬಂಧಿಸಿದ್ದರು.
ರೇವ್ ಪಾರ್ಟಿಯಲ್ಲಿ ಎಂ.ಡಿ.ಎಂ.ಎ. (MDMA) ಫಿಲ್ಸ್ ಮತ್ತು ಕೊಕೇನ್ (Cocaine) ಬಳಕೆಯಾಗಿತ್ತು ಎಂದು ತಿಳಿದುಬಂದಿತ್ತು. ಪೊಲೀಸರು ತನಿಖೆ ನಡೆಸಿ 88 ಜನರ ಮೇಲೆ ಚಾರ್ಜ್‌ಶೀಟ್ (Charge Sheet) ಸಲ್ಲಿಸಿದ್ದರು. ಚಾರ್ಜ್‌ಶೀಟ್ ಬಳಿಕ ಪ್ರಕರಣಕ್ಕೆ ತಡೆ ಹಾಗೂ ರದ್ದತಿ ಕೋರಿ ನಟಿ ಹೇಮಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.






