ಬೆಂಗಳೂರು: ಮಾಜಿ ಸಂಸದ ಡಿ.ಕೆ. ಸುರೇಶ್ (D.K. Suresh) ಅವರ ಹೆಸರನ್ನು ಬಳಸಿಕೊಂಡು ಚಿನ್ನದ ವಂಚನೆ ನಡೆಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸ್ಯಾಂಡಲ್‌ವುಡ್ ನಟ ಧರ್ಮ (Dharma) ಅವರಿಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಈ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, ನಟ ಧರ್ಮ ಅವರ ಧ್ವನಿ ಮಾದರಿ (Voice Sample) ಪಡೆಯಲು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ವಂಚನೆ ಮಾಡುವಾಗ ಆರೋಪಿಯು ಡಿ.ಕೆ. ಸುರೇಶ್ ಅವರ ಧ್ವನಿಯನ್ನು ಅನುಕರಿಸಿ (Mimicry) ಮಾತನಾಡಿದ್ದಾರೆ ಎಂಬ ಗಂಭೀರ ಆರೋಪ ನಟ ಧರ್ಮ ಅವರ ಮೇಲಿದೆ. ಈ ಆರೋಪದ ಸಂಬಂಧ ಧ್ವನಿ ಮಾದರಿಯನ್ನು ವೈಜ್ಞಾನಿಕವಾಗಿ ಪರೀಕ್ಷಿಸಿ, ವಂಚನೆಗೆ ಬಳಸಲಾದ ಧ್ವನಿಯೊಂದಿಗೆ ಹೋಲಿಸಲು ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.
ನ್ಯಾಯಾಲಯವು ಸಿಐಡಿ ಮನವಿಗೆ ಅನುಮತಿ ನೀಡಿದರೆ, ನಟ ಧರ್ಮ ಅವರು ಕಡ್ಡಾಯವಾಗಿ ವಾಯ್ಸ್ ಸ್ಯಾಂಪಲ್ ನೀಡಬೇಕಾಗುತ್ತದೆ. ಪರೀಕ್ಷೆಯಲ್ಲಿ ಧ್ವನಿ ಹೊಂದಾಣಿಕೆಯಾದರೆ, ಈ ಗೋಲ್ಡ್ ವಂಚನೆ ಪ್ರಕರಣದಲ್ಲಿ ನಟ ಧರ್ಮ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಸದ್ಯ ತನಿಖಾ ತಂಡ ನ್ಯಾಯಾಲಯದ ಆದೇಶಕ್ಕಾಗಿ ಕಾಯುತ್ತಿದೆ.






