ಬೆಂಗಳೂರು :ನಗರದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು, ಗ್ಯಾಸ್ ಗೀಸರ್‌ನಿಂದ (Gas Geyser) ಅನಿಲ ಸೋರಿಕೆಯಾಗಿ (Gas Leak) ತಾಯಿ ಮತ್ತು ಮಗು ಮೃ*ತಪಟ್ಟಿದ್ದಾರೆ.
ಬೆಂಗಳೂರಿನ ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಂಚಶೀಲನಗರದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತ ದುರ್ದೈವಿಗಳನ್ನು ಚಾಂದಿನಿ (26) ಮತ್ತು ಆಕೆಯ ಪುತ್ರ ಯುವಿ (4) ಎಂದು ಗುರುತಿಸಲಾಗಿದೆ.
ನೆನ್ನೆ ಮಧ್ಯಾಹ್ನ ಚಾಂದಿನಿ ಅವರು ಮಗುವಿನೊಂದಿಗೆ ಸ್ನಾನ ಮಾಡಲು ಹೋಗಿದ್ದಾಗ, ಸ್ನಾನದ ಕೋಣೆಯಲ್ಲಿ ಗ್ಯಾಸ್ ಗೀಸರ್‌ನಿಂದ ಗ್ಯಾಸ್ ಲೀಕ್ ಆಗಿದೆ. ಗ್ಯಾಸ್ ಉಸಿರಾಟದ ಮೂಲಕ ದೇಹಕ್ಕೆ ಸೇರಿ ತಾಯಿ ಮತ್ತು ಮಗು ಇಬ್ಬರೂ ತೀವ್ರ ಅಸ್ವಸ್ಥರಾಗಿದ್ದಾರೆ.
ತಕ್ಷಣವೇ ಸ್ಥಳೀಯರು ಇಬ್ಬರನ್ನೂ ರಕ್ಷಿಸಿ ವಿಕ್ಟೋರಿಯಾ ಆಸ್ಪತ್ರೆಗೆ (Victoria Hospital) ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ತಾಯಿ ಚಾಂದಿನಿ ಮತ್ತು ಮಗು ಯುವಿ ಕೊನೆಯುಸಿರೆಳೆದಿದ್ದಾರೆ.
ಈ ಬಗ್ಗೆ ಗೋವಿಂದರಾಜನಗರ ಪೊಲೀಸರು ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






