ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ (Darshan) ಅವರಿಗೆ ಕೊನೆಗೂ ಪರಪ್ಪನ ಅಗ್ರಹಾರ ಜೈಲಿನಲ್ಲಿ (Parappana Agrahara Jail) ಟಿವಿ ಭಾಗ್ಯ ದೊರೆತಿದೆ.
ಜೈಲಾಧಿಕಾರಿಗಳು ದರ್ಶನ್ ಅವರನ್ನು ಇರಿಸಿರುವ ಬ್ಯಾರಕ್‌ಗೆ ಅಳವಡಿಸಲು ಹೊಸ ಟಿವಿಯನ್ನು ಮಂಗಳವಾರವೇ ಬುಕ್ ಮಾಡಿದ್ದರು. ಬುಕ್ ಮಾಡಲಾದ ಈ ಹೊಸ ಟಿವಿಯನ್ನು ಇಂದು (ಬುಧವಾರ) ದರ್ಶನ್ ಇರುವ ಬ್ಯಾರಕ್‌ಗೆ ಫಿಕ್ಸ್ ಮಾಡಲು ಜೈಲು ಸಿಬ್ಬಂದಿ ಸಿದ್ಧತೆ ನಡೆಸಿದ್ದಾರೆ.
ಜೈಲು ನಿಯಮಗಳ ಪ್ರಕಾರ, ನಟ ದರ್ಶನ್‌ಗೆ ಸೀಮಿತ ಚಾನಲ್‌ಗಳನ್ನು (Limited Channels) ಮಾತ್ರ ನೋಡಲು ಅವಕಾಶ ನೀಡಲಾಗುವುದು. ಈ ಮೂಲಕ ಅವರು ದೇಶ-ವಿದೇಶದಲ್ಲಿ ನಡೆಯುವ ಪ್ರಮುಖ ಸುದ್ದಿಗಳನ್ನು ಮತ್ತು ಸಾರ್ವಜನಿಕ ಪ್ರಸಾರಗಳನ್ನು ವೀಕ್ಷಿಸಬಹುದು.






