ಗೋರಖ್‌ಪುರ(ಉತ್ತರ ಪ್ರದೇಶ): ಮದುವೆಯೆಂದರೆ ನೂರೆಂಟು ಕನಸುಗಳನ್ನು ಹೊತ್ತು ಹಸೆಮಣೆ ಏರುವ ಜೋಡಿಗಳು, ಜೀವನ ಪರ್ಯಂತ ಒಟ್ಟಿಗೆ ಬಾಳುವ ಪ್ರಮಾಣ ಮಾಡುತ್ತಾರೆ. ಆದರೆ ಗೋರಖ್‌ಪುರದಲ್ಲಿ ನಡೆದ ಘಟನೆಯೊಂದು ಮದುವೆಯಾದ ಮೂರೇ ದಿನಕ್ಕೆ ವಿಚ್ಛೇದನದ ಹಂತಕ್ಕೆ ತಲುಪಿದೆ.
ನವವಿವಾಹಿತೆಯೊಬ್ಬರು ಮದುವೆಯಾದ ಕೇವಲ ಮೂರು ದಿನಗಳ ನಂತರ ವಿಚ್ಛೇದನ ಕೋರಿ ನೋಟಿಸ್ ನೀಡಿದ್ದು, ಇದಕ್ಕೆ ಕಾರಣ ಪತಿ ಮೊದಲ ರಾತ್ರಿಯೇ ಹೇಳಿಕೊಂಡ ಆಘಾತಕಾರಿ ಸತ್ಯ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ನವೆಂಬರ್ 28 ರಂದು ಬೆಲಿಯಾಪರ್‌ನಲ್ಲಿ ಅದ್ದೂರಿಯಾಗಿ ಮದುವೆ ನೆರವೇರಿತ್ತು. ಆದರೆ ಮೊದಲ ರಾತ್ರಿಯೇ (First Night) ಪತಿ ತಾನು ದೈಹಿಕವಾಗಿ ದುರ್ಬಲನಾಗಿದ್ದು, ದಾಂಪತ್ಯ ಜೀವನ ನಡೆಸಲು ಅಸಮರ್ಥ ಎಂದು ಪತ್ನಿಯ ಬಳಿ ಒಪ್ಪಿಕೊಂಡಿದ್ದಾನೆ. ಇದನ್ನು ಕೇಳಿ ಆಘಾತಗೊಂಡ ವಧು, “ದೈಹಿಕವಾಗಿ ಅಸಮರ್ಥನಾಗಿರುವ ವ್ಯಕ್ತಿಯೊಂದಿಗೆ ನಾನು ಜೀವನ ನಡೆಸಲು ಸಾಧ್ಯವಿಲ್ಲ” ಎಂದು ನಿರ್ಧರಿಸಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ.
ವಿಷಯ ತಿಳಿದ ವಧುವಿನ ಕುಟುಂಬಸ್ಥರು ಡಿಸೆಂಬರ್ 1 ರಂದು ಸಾಂಪ್ರದಾಯಿಕ ಆಚರಣೆಗಾಗಿ ಅತ್ತೆಯ ಮನೆಗೆ ತೆರಳಿದ್ದಾಗ ಈ ವಿಷಯ ಚರ್ಚೆಗೆ ಬಂದಿದೆ. ಬಳಿಕ ಡಿಸೆಂಬರ್ 3 ರಂದು ಎರಡೂ ಕುಟುಂಬಗಳ ಸಮ್ಮುಖದಲ್ಲಿ ಪಂಚಾಯ್ತಿ ನಡೆದಿದ್ದು, ವರನನ್ನು ಗೋರಖ್‌ಪುರದ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ವರದಿಯಲ್ಲಿ ವರನು ಲೈಂಗಿಕ ಸಂಬಂಧ ಹೊಂದಲು ಅನರ್ಹ ಮತ್ತು “ತಂದೆಯಾಗಲು ಸಾಧ್ಯವಿಲ್ಲ” ಎಂದು ವೈದ್ಯರು ದೃಢಪಡಿಸಿದ್ದಾರೆ ಎಂದು ವಧುವಿನ ಕುಟುಂಬ ಆರೋಪಿಸಿದೆ.
ಸಹಜನ್ವಾ ಮೂಲದ ವರ, ಶ್ರೀಮಂತ ರೈತ ಕುಟುಂಬದ ಏಕೈಕ ಪುತ್ರನಾಗಿದ್ದು, ಗೋರಖ್‌ಪುರ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದಲ್ಲಿ (GIDA) ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ. ಆಘಾತಕಾರಿ ವಿಷಯವೆಂದರೆ, ಇದು ಈತನಿಗೆ ಎರಡನೇ ಮದುವೆಯಾಗಿದ್ದು, ಎರಡು ವರ್ಷಗಳ ಹಿಂದೆ ಮೊದಲ ಪತ್ನಿ ಕೂಡ ಇದೇ ಕಾರಣಕ್ಕಾಗಿ ಮದುವೆಯಾದ ತಿಂಗಳೊಳಗೆ ಇವನನ್ನು ಬಿಟ್ಟು ಹೋಗಿದ್ದಳು ಎಂದು ತಿಳಿದುಬಂದಿದೆ. ವಿಷಯ ಮುಚ್ಚಿಟ್ಟು ಮದುವೆ ಮಾಡಿ ಮೋಸ ಮಾಡಿದ್ದಾರೆ ಎಂದು ವಧುವಿನ ಕಡೆಯವರು ಆಕ್ರೋಶ ವ್ಯಕ್ತಪಡಿಸಿದ್ದು, ಮದುವೆಗೆ ಖರ್ಚಾದ ಹಣ ಮತ್ತು ಉಡುಗೊರೆಗಳನ್ನು ಹಿಂದಿರುಗಿಸುವಂತೆ ಲೀಗಲ್ ನೋಟಿಸ್ ನೀಡಿದ್ದಾರೆ.
Gorakhpur News, Divorce Case, Marriage Fraud, Viral News Kannada, Husband Impotence, Uttar Pradesh Crime, GIDA Engineer






