Home State Politics National More
STATE NEWS

Parappana Agrahara ರಾಜಾತಿಥ್ಯ ವಿಡಿಯೋ‌ ವೈರಲ್‌; ಡೇಟಾ ಇಲ್ಲದ ಫೋನ್ ಕೊಟ್ಟ ನಟ ಧನ್ವೀರ್!

Dhanveer gowda ccb enquiry1
Posted By: Meghana Gowda
Updated on: Dec 10, 2025 | 6:06 AM

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ (Parappana Agrahara Central Prison) ಕೈದಿಗಳಿಗೆ ರಾಜಾತಿಥ್ಯ (Royal Treatment) ಸಿಗುತ್ತಿದ್ದ ವಿಡಿಯೋ ವೈರಲ್ (Viral Video) ಆದ ಪ್ರಕರಣದ ತನಿಖೆ ತೀವ್ರಗೊಂಡಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿರುವ ಕೆಲ ಕೈದಿಗಳು ತನಿಖಾಧಿಕಾರಿಗಳಿಗೆ ಸಹಕಾರ ನೀಡುತ್ತಿಲ್ಲ ಎಂದು ತಿಳಿದುಬಂದಿದೆ.

ಈ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಧನ್ನೀರ್ (Dhannir) ಅವರ ಮೊಬೈಲ್ ರಿಟ್ರೀವ್ (Mobile Retrieve) ವರದಿಯು ಸೈಬರ್ ಸೆಲ್‌ನಿಂದ (Cyber Cell) ಪೊಲೀಸರ ಕೈ ಸೇರಿದೆ.  ಮೊಬೈಲ್ ರಿಟ್ರೀವ್ ವರದಿಯ ಪ್ರಕಾರ, ಧನ್ನೀರ್ ಫೋನಿನಲ್ಲಿ ಯಾವುದೇ ಡೇಟಾ ಲಭ್ಯವಿಲ್ಲ ಎಂದು ತಿಳಿದುಬಂದಿದೆ. ಇದರಿಂದ ಧನ್ನೀರ್ ಅವರು ಬೇಕೆಂದೇ ಪೊಲೀಸರಿಗೆ ಡೇಟಾ ಇಲ್ಲದ ಫೋನ್ ಕೊಟ್ಟು ವಂಚಿಸಲು ಯತ್ನಿಸಿದ್ದಾರೆ ಅಥವಾ ಸಾಕ್ಷ್ಯ ನಾಶ  ಮಾಡಿದ್ದಾರೆ ಎಂಬ ತೀರ್ಮಾನಕ್ಕೆ ಪೊಲೀಸರು ಬರುತ್ತಿದ್ದಾರೆ.

ಸದ್ಯಕ್ಕೆ ಪೊಲೀಸರು ಎಫ್‌ಎಸ್‌ಎಲ್ (FSL) ವರದಿಗಾಗಿ ಕಾಯುತ್ತಿದ್ದಾರೆ. ಎಫ್‌ಎಸ್‌ಎಲ್ ವರದಿ ಬಂದ ನಂತರ, ಧನ್ನೀರ್ ಅವರು ಸಾಕ್ಷ್ಯ ನಾಶ ಮಾಡಿದ್ದಾರೆಂಬ ಅಂಶವನ್ನೇ ಪ್ರಮುಖ ಪಾಯಿಂಟ್ ಆಗಿಟ್ಟುಕೊಂಡು ಚಾರ್ಜ್‌ಶೀಟ್ (Charge Sheet) ಸಲ್ಲಿಸಲು ತೀರ್ಮಾನಿಸಿದ್ದಾರೆ.

ಇದೇ ವೇಳೆ ಜೈಲಿನೊಳಗೆ ವಿಡಿಯೋ ಚಿತ್ರೀಕರಿಸಿದ್ದ ಕೋಳಿ ಮಂಜ (Koli Manja) ಎಂಬಾತನನ್ನು ಪೊಲೀಸರು ವಿಚಾರಣೆ ನಡೆಸಿದ್ದರು.ವಿಚಾರಣೆ ವೇಳೆ ಮಂಜ, ವಿಡಿಯೋ ರಿಲೀಸ್ ಮಾಡಲು ಹೇಳಿದ್ದು ವಿಲ್ಸನ್ ಗಾರ್ಡನ್ ನಾಗ (Wilson Garden Naga) ಎಂದು ಹೆಸರು ಹೇಳಿದ್ದಾನೆ.

ಮಂಜನ ಹೇಳಿಕೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಹಿಂಡಲಗಾ ಜೈಲಿನಲ್ಲಿರುವ ನಾಗನ ವಿಚಾರಣೆ ನಡೆಸಲಾಯಿತು. ಆದರೆ, ವಿಲ್ಸನ್ ಗಾರ್ಡನ್ ನಾಗ, “ನಾನು ಫೋನ್ ಬಳಸಿಯೇ ವರ್ಷಗಳಾಗಿದೆ. ಜೈಲಲ್ಲಿ ಫೋನ್ ಸಿಗುತ್ತೋ ಗೊತ್ತಿಲ್ಲ, ನನಗಂತೂ ಸಿಕ್ಕಿಲ್ಲ. ಬೇಕು ಅಂತ ನನ್ನನ್ನು ಸಿಲುಕಿಸುವ ಕೆಲಸ ಆಗ್ತಾ ಇದೆ. ಕೋಳಿ ಮಂಜ ನನಗೆ ಗೊತ್ತಿಲ್ಲ. ಈ ವಿಡಿಯೋ ವೈರಲ್‌ಗೂ ನನಗೂ ಸಂಬಂಧ ಇಲ್ಲ,” ಎಂದು ಕಡ್ಡಿ ಮುರಿದಂತೆ ಹೇಳಿಕೆ ನೀಡಿದ್ದಾನೆ.

ಸದ್ಯ, ವಿಡಿಯೋ ವೈರಲ್ ಮಾಡಿದವರು ಯಾರು ಎಂಬ ಮಾಹಿತಿ ಇನ್ನೂ ನಿಗೂಢವಾಗಿಯೇ ಉಳಿದಿದೆ. ಜೈಲಿನಿಂದ ಧರ್ಗೆ ಬಂದ ಧನ್ನೀರ್ ಅವರೇ ವೈರಲ್ ಮಾಡಿ, ನಂತರ ಸಾಕ್ಷ್ಯ ನಾಶ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

Shorts Shorts