ಬೆಂಗಳೂರು: ಹೊಸ ವರ್ಷಾಚರಣೆಗೆ (New Year Countdown) ಕೌಂಟ್ ಡೌನ್ ಶುರುವಾಗಿರುವ ಬೆನ್ನಲ್ಲೇ, ಯುವ ಸಮೂಹದ ಹಾಟ್ ಫೇವರೇಟ್ ಸಿಲಿಕಾನ್ ಸಿಟಿಯ ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ (Pubs, Bars, Restaurants) ಬೆಂಗಳೂರು ಪೊಲೀಸರು (Bengaluru Police) ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು (Strict Guidelines) ಪ್ರಕಟಿಸಿದ್ದಾರೆ. ಗೋವಾದಲ್ಲಿ ಇತ್ತೀಚೆಗೆ ನಡೆದ ಪಬ್ ಅಗ್ನಿ ದುರಂತದ ಹಿನ್ನೆಲೆಯಲ್ಲಿ ಈ ಬಾರಿ ಖಾಕಿ ಹೈ ಅಲರ್ಟ್ ಆಗಿದೆ.
ಹೊಸ ವರ್ಷಾಚರಣೆಯ ಕಟ್ಟುನಿಟ್ಟಿನ ನಿಯಮಗಳು:
ಪಬ್, ಬಾರ್ ಮತ್ತು ರೆಸ್ಟೋರೆಂಟ್ ಮಾಲೀಕರ ಜೊತೆ ಸಭೆ ನಡೆಸಿರುವ ಪೊಲೀಸರು, ಈ ವರ್ಷದ ಸೆಲೆಬ್ರೇಷನ್‌ಗಳಿಗೆ ಕಡ್ಡಾಯವಾಗಿ ಪಾಲಿಸಬೇಕಾದ ನಿಯಮಗಳನ್ನು ಸೂಚಿಸಿದ್ದಾರೆ:
ನ್ಯೂ ಇಯರ್ ಪಾರ್ಟಿ ಆಯೋಜಿಸಲು ಫೈರ್ ಡಿಪಾರ್ಟ್ಮೆಂಟ್ (Fire Department) ಪರ್ಮಿಷನ್ (Permission) ಕಡ್ಡಾಯ. ಅಗ್ನಿ ಸುರಕ್ಷತಾ ಇಲಾಖೆಯ ಅನುಮತಿ ಇಲ್ಲದಿದ್ದರೆ ಅಂತಹ ಪಬ್, ಬಾರ್‌ಗಳನ್ನು ಮುಚ್ಚಿಸಲಾಗುವುದು. ಅನುಮತಿ ಇಲ್ಲದೆ ಸೇವೆ ನೀಡಿದಲ್ಲಿ ಮಾಲೀಕರ ವಿರುದ್ಧ ಕಾನೂನು ಕ್ರಮ (Legal Action) ಜರುಗಿಸಲಾಗುತ್ತದೆ.
ಪಬ್, ಬಾರ್‌ಗಳಲ್ಲಿ ನಿಗದಿತ ಸಾಮರ್ಥ್ಯಕ್ಕಿಂತ (Capacity) ಹೆಚ್ಚು ಗ್ರಾಹಕರನ್ನು ಸೇರಿಸುವಂತಿಲ್ಲ. ಒಂದು ವೇಳೆ ಅಗತ್ಯಕ್ಕಿಂತ ಹೆಚ್ಚು ಗ್ರಾಹಕರು ಸೇರಿ ಯಾವುದೇ ಅನಾಹುತ ನಡೆದರೆ ಅದಕ್ಕೆ ಮಾಲೀಕರೇ ಸಂಪೂರ್ಣ ಹೊಣೆಗಾರರು. ಹಾಗೂ ನಿಗದಿಪಡಿಸಿದ ಸಮಯ ಮೀರಿ (Time Limit) ಯಾವುದೇ ಸೇವೆ ನೀಡುವಂತಿಲ್ಲ.
ಸೆಲೆಬ್ರೇಷನ್ ನಡೆಯುವ ಪ್ರತಿ ಬಾರ್ ಮತ್ತು ಪಬ್‌ನ ಜಾಗದಲ್ಲಿ ಸಿಸಿಟಿವಿ (CCTV) ಅಳವಡಿಕೆ ಕಡ್ಡಾಯ. ಮತ್ತು ಪಾರ್ಟಿ ವೇಳೆ ಮಹಿಳೆಯರ ಸುರಕ್ಷತೆ (Women’s Safety) ಕುರಿತು ಮಾಲೀಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಿದ್ಧತೆ ನಡೆಸಿದ್ದಾರೆ.






