Home State Politics National More
STATE NEWS

ಸರ್ಕಾರಿ ಶಾಲೆಯಲ್ಲೇ Fake Police Station: 300 ಜನರಿಗೆ ನಕಲಿ ‘ಸರ್ಕಾರಿ ಕೆಲಸ’ ನೀಡಿದ ಭೂಪ..!

Fake police station
Posted By: Meghana Gowda
Updated on: Dec 11, 2025 | 8:50 AM

ಪಾಟ್ನಾ: ಉದ್ಯೋಗಕ್ಕಾಗಿ ಹಾತೊರೆಯುತ್ತಿದ್ದ 300ಕ್ಕೂ ಹೆಚ್ಚು ಯುವಕರಿಗೆ ನಕಲಿ ಪೊಲೀಸ್ ಠಾಣೆಯ (Fake Police Station) ಮೂಲಕ ಉದ್ಯೋಗ ನೀಡಿ ವಂಚಿಸಿದ್ದ ಅಚ್ಚರಿಯ ಘಟನೆ ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ (Purnia, Bihar) ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್‌ ಆಗಿದೆ.

ರಾಹುಲ್ ಕುಮಾರ್ (Rahul Kumar) ಎಂಬ ಯುವಕ ಸರ್ಕಾರಿ ಶಾಲಾ ಕಟ್ಟಡದಲ್ಲಿ (School Building) ನಕಲಿ ಪೊಲೀಸ್ ಠಾಣೆಯನ್ನು ಆರಂಭಿಸಿ,  ಸ್ವತಃ ನಿಜವಾದ ಪೊಲೀಸ್ ಅಧಿಕಾರಿಯಂತೆ ಸಮವಸ್ತ್ರ ಧರಿಸಿ, ತನ್ನನ್ನು ‘ಇನ್ಸ್‌ಪೆಕ್ಟರ್’ (Inspector) ಎಂದು ಕರೆದುಕೊಂಡಿದ್ದ.

 ಗ್ರಾಮದ 300ಕ್ಕೂ ಹೆಚ್ಚು ಯುವಕರಿಗೆ ‘ಪೊಲೀಸ್ ಕೆಲಸ’ (Police Job) ನೀಡುವುದಾಗಿ ಭರವಸೆ ನೀಡಿ, ಪ್ರತಿ ವ್ಯಕ್ತಿಯಿಂದ ₹10,000 ದಿಂದ ₹25,000 ವರೆಗೆ ಹಣ ಸಂಗ್ರಹಿಸಿದ್ದ.

ಈ ಉದ್ಯೋಗ ನಿಜವೆಂದು ಜನ ನಂಬುವಂತೆ ಮಾಡಲು, ಆತ ನಕಲಿ ಸಮವಸ್ತ್ರಗಳು (Fake uniforms), ನಕಲಿ ಗುರುತಿನ ಚೀಟಿಗಳು (Fake ID cards), ನಕಲಿ ಲಾಠಿಗಳು ಮತ್ತು ನಕಲಿ ತರಬೇತಿಯನ್ನು (Fake training) ನೀಡಿದ್ದ. ಇದರಿಂದ ಎಲ್ಲರೂ ‘ಇದು ನಿಜವಾದ ಸರ್ಕಾರಿ ಕೆಲಸ’ ಎಂದು ನಂಬಿದ್ದರು.

ನಕಲಿ ಸಿಬ್ಬಂದಿಗೆ ವಾಹನ ತಪಾಸಣೆ (Vehicle Checks) ಮತ್ತು ಮದ್ಯ ಕಳ್ಳಸಾಗಣೆದಾರರನ್ನು (Liquor Smugglers) ಗುರಿಯಾಗಿಸಿ ದಾಳಿಗಳನ್ನು ನಡೆಸುವ ಜವಾಬ್ದಾರಿಗಳನ್ನು ನೀಡಲಾಗಿತ್ತು.  ಹಾಗೂ ಹೆಲ್ಮೆಟ್ ಧರಿಸದಿರುವುದು ಅಥವಾ ಚಾಲನಾ ಪರವಾನಗಿ ಇಲ್ಲದಿರುವಂತಹ ಉಲ್ಲಂಘನೆಗಳಿಗೆ ವಾಹನ ಚಾಲಕರಿಂದ ₹ 400 ದಂಡ ವಸೂಲಿ ಮಾಡಲಾಗುತ್ತಿತ್ತು. ವಸೂಲಿ ಮಾಡಿದ ಹಣದಲ್ಲಿ ₹ 200 ಗಸ್ತು ತಂಡಕ್ಕೆ ಕಮಿಷನ್ ಆಗಿ ಹೋಗುತ್ತಿತ್ತು, ಉಳಿದ ಹಣವನ್ನು ರಾಹುಲ್ ಪಾಲಾಗುತ್ತಿತ್ತು.

ಆದರೆ, ನೇಮಕವಾಗಿ 2-3 ತಿಂಗಳು ಕಳೆದರೂ ಯಾರಿಗೂ ವೇತನ (Salary) ಸಿಗಲಿಲ್ಲ. ಇದರಿಂದ ಯುವಕರಿಗೆ ಅನುಮಾನ ಶುರುವಾಗಿ, ಪ್ರಶ್ನಿಸಲು ಆರಂಭಿಸಿದರು. ಇದೇ ಸಂದರ್ಭದಲ್ಲಿ ಆರೋಪಿ ರಾಹುಲ್ ಕುಮಾರ್ ಇದ್ದಕ್ಕಿದ್ದಂತೆ ಗ್ರಾಮದಿಂದ ತಲೆಮರೆಸಿಕೊಂಡಾಗ,  ಅಲ್ಲಿ ನೇಮಕವಾಗಿದ್ದ 300ಕ್ಕೂ ಹೆಚ್ಚು ಯುವಕರಿಗೆ ಇದು ದೊಡ್ಡ ಹಗರಣ (Massive Scam) ಎಂಬ ಸತ್ಯ ತಿಳಿಯಿತು.

ಈ ಘಟನೆ ಕುರಿತಂತೆ ಕಳೆದ ಜೂನ್‌ ನಲ್ಲಿ ಎಫ್.ಐ.ಆರ್‌ ದಾಖಲಾಗಿದ್ದು, ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್‌ ಆಗಿದೆ.

Shorts Shorts