ಬೆಳಗಾವಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆ (Leadership Change) ಕುರಿತು ಚರ್ಚೆಗಳು ಮತ್ತೆ ತೀವ್ರಗೊಂಡಿರುವ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ಅವರ ಸಹೋದರ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ (D.K. Suresh) ಅವರು ಬೆಳಗಾವಿಯಲ್ಲಿ ಮಾಧ್ಯಮಗಳ ಮುಂದೆ ಮಾರ್ಮಿಕವಾಗಿ ಮಾತನಾಡಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಸುರೇಶ್ ಅವರು, ಎಲ್ಲ ಕಡೆ ವಾತಾವರಣ ಚೆನ್ನಾಗಿದೆ ಎಂದು ಪ್ರಾಸಂಗಿಕವಾಗಿ ಹೇಳುವ ಮೂಲಕ ರಾಜಕೀಯ ಬೆಳವಣಿಗೆಗಳ ಬಗ್ಗೆ ಪರೋಕ್ಷವಾಗಿ ಮಾತನಾಡಿದರು.
ಬೆಳಗಾವಿಯಲ್ಲಿ ಈಗ ವಾತಾವರಣ ಚೆನ್ನಾಗಿದೆ. ಚಳಿ ಇರೋದ್ರಿಂದ ವ್ಯಾಪಾರಕ್ಕೆ ಮತ್ತು ಈ ಭಾಗದ ಮುಂದಿನ ಬೆಳವಣಿಗೆಗೆ ಒಳ್ಳೆಯ ವಾತಾವರಣ ಇದೆ. ಪ್ರವಾಸೋದ್ಯಮ (Tourism) ಬೆಳವಣಿಗೆಗೂ ಈ ವಾತಾವರಣ ಪೂರಕವಾಗಿದ್ದು,ಬೆಳಗಾವಿಯಷ್ಟೇ ಅಲ್ಲದೆ, ರಾಜ್ಯದಲ್ಲೂ ಕೂಡ ಉತ್ತಮ ವಾತಾವರಣ ಇದೆ ಎಂದು ಹೇಳಿದರು.






