Home State Politics National More
STATE NEWS

Siddaramaiah ಮುಂದುವರಿದರೆ ಬೆಂಬಲ, ಬದಲಾದರೆ ದಲಿತ ನಾಯಕರೇ CM ಆಗಬೇಕು: ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ

Swamiji (1)
Posted By: Meghana Gowda
Updated on: Dec 11, 2025 | 6:27 AM

ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಕುರಿತು ಚರ್ಚೆಗಳು ನಡೆಯುತ್ತಿರುವ ನಡುವೆಯೇ, ವಾಲ್ಮೀಕಿ ಪೀಠದ ರಾಜನಹಳ್ಳಿ ಪ್ರಸನ್ನಾನಂದ ಸ್ವಾಮೀಜಿ (Rajanahalli Prasannananda Swami) ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ (Siddaramaiah) ಅವರೇ ಮುಖ್ಯಮಂತ್ರಿಯಾಗಿ ಮುಂದುವರಿದರೆ ವಾಲ್ಮೀಕಿ ಸಮುದಾಯದ (Valmiki Community) ವಿರೋಧವಿಲ್ಲ, ಒಂದು ವೇಳೆ ಬದಲಾವಣೆ ಆದರೆ ಅಹಿಂದ ಅಥವಾ ದಲಿತ (Dalit/AHINDA) ಸಮುದಾಯದ ನಾಯಕರಿಗೆ ಸಿಎಂ ಸ್ಥಾನ ನೀಡಬೇಕೆಂದು ಸ್ವಾಮೀಜಿಗಳು ಬಲವಾಗಿ ಒತ್ತಾಯಿಸಿದ್ದಾರೆ.

ಬೆಳಗಾವಿಯ ಖಾಸಗಿ ಹೋಟೆಲ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ವಾಮೀಜಿಗಳು, ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ಅವರು ಸಿಎಂ ಆಗಬಾರದು ಎಂಬ ನಿಲುವು ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆದರೆ ನಮ್ಮ ಹಾಗೂ ವಾಲ್ಮೀಕಿ ಸಮಾಜದ ಶಾಸಕರ ವಿರೋಧವಿಲ್ಲ. ಸಮಾಜದಿಂದಲೂ ಅವರಿಗೆ ಸಂಪೂರ್ಣ ಬೆಂಬಲವಿದೆ. ಒಂದು ವೇಳೆ ಸಿಎಂ ಸ್ಥಾನದಿಂದ ಇಳಿದರೆ, ಬದಲಾವಣೆ ಮಾಡಿದರೆ ದಲಿತರು ಮುಖ್ಯಮಂತ್ರಿ ಆಗಬೇಕು ಎಂದು ಒತ್ತಾಯಿಸುತ್ತೇವೆ. ಇದು ಅಹಿಂದ ಮುಖಂಡರಿಗೆ ಸಿಎಂ ಸ್ಥಾನ ನೀಡಬೇಕು ಎಂಬ ನಿಲುವನ್ನು ಸ್ಪಷ್ಟಪಡಿಸುತ್ತದೆ.

ಸಿಎಂ ಸ್ಥಾನಕ್ಕೆ ದಲಿತ ಸಮುದಾಯದ ನಾಯಕರ ಹೆಸರನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಸ್ವಾಮೀಜಿ, ನಮ್ಮ ಸಮಾಜದಲ್ಲಿ ನಾಲ್ಕೈದು ನಾಯಕರಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ, ಎಚ್.ಸಿ. ಮುನಿಯಪ್ಪ ಹಾಗೂ ಸತೀಶ ಜಾರಕಿಹೋಳಿಯವರೂ ಸಿಎಂ ಆಗಲಿ ಎಂದು ಹೇಳಿದ್ದಾರೆ.

 ಈ ಹೇಳಿಕೆಗಳ ಮೂಲಕ, ಒಕ್ಕಲಿಗ ಸಮುದಾಯದವರಾದ ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗಬಾರದು ಎಂಬ ಸ್ಪಷ್ಟ ಪರೋಕ್ಷ ಟಾಂಗ್ ಅನ್ನು ರಾಜನಹಳ್ಳಿ ಪ್ರಸನ್ನಾನಂದ ಸ್ವಾಮೀಜಿ ನೀಡಿದ್ದಾರೆ.

ಇದೇ ವೇಳೆ ವಾಲ್ಮೀಕಿ ಜಯಂತಿ ಕುರಿತು ಮಾತನಾಡಿದ ಅವರು, ನಿನ್ನೆ ವಾಲ್ಮೀಕಿ ಸಮಾಜದ ಶಾಸಕರ ಸಭೆ ನಡೆಸಿದ್ದು, ಅದು ಪ್ರತಿ ವರ್ಷದಂತೆ ಮಠದಿಂದ ನಡೆಸಲಾಗುವ ವಾಲ್ಮೀಕಿ ಜಯಂತಿ ಮತ್ತು ಜಾತ್ರೆಯ ಬಗ್ಗೆ ಚರ್ಚಿಸಲು ಕರೆಯಲಾಗಿತ್ತು ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು. ರಾಯಚೂರಿನ ಶಾಸಕ ಬಸವನಗೌಡ ದದ್ದಲ್ ಅವರನ್ನು ಜಾತ್ರಾಧ್ಯಕ್ಷರನ್ನಾಗಿ ಮಾಡಲಾಗಿದೆ. ಇಂದು ಮಧ್ಯಾಹ್ನ ಸಿಎಂ ಸಿದ್ದರಾಮಯ್ಯ ಅವರನ್ನು ಜಾತ್ರೆಗೆ ಆಹ್ವಾನಿಸಲು ಹೊರಟಿದ್ದು, ಈ ವೇಳೆ ಸಮುದಾಯಕ್ಕೆ ಎರಡು ಸಚಿವ ಸ್ಥಾನಗಳನ್ನು ನೀಡಬೇಕೆಂದು ಮನವಿ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

Shorts Shorts