ಬೆಂಗಳೂರು: ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್‌ನಲ್ಲಿ (Instagram) ರೀಲ್ಸ್ ನೋಡಿ ಮರುಳಾದ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರು, ವಿವಾಹಿತ ಮಹಿಳೆಯೊಬ್ಬರನ್ನು ಕರೆದುಕೊಂಡು ಪರಾರಿಯಾದ ಘಟನೆ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಕಾನ್‌ಸ್ಟೇಬಲ್ ರಾಘವೇಂದ್ರ ಅವರನ್ನು ಅಮಾನತುಗೊಳಿಸಲಾಗಿದೆ.
ರೀಲ್ಸ್ ಪ್ರೇಮ ಕಹಾನಿ:
ಮೋನಿಕಾ ಎಂಬುವವರೇ ಕಾನ್‌ಸ್ಟೇಬಲ್ ಜೊತೆ ಪರಾರಿಯಾದ ಮಹಿಳೆ. ಕಳೆದ 6 ತಿಂಗಳ ಹಿಂದೆ ಇನ್ಸ್ಟಾಗ್ರಾಮ್ ಮೂಲಕ ಮೋನಿಕಾ ಮತ್ತು ರಾಘವೇಂದ್ರ ಅವರ ಪರಿಚಯವಾಗಿತ್ತು. ಮೋನಿಕಾ ಅವರು ಮಾಡುತ್ತಿದ್ದ ರೀಲ್ಸ್ (Reels) ವಿಡಿಯೋಗಳನ್ನು ನೋಡಿ ರಾಘವೇಂದ್ರ ಆಕೆಯ ಪ್ರೀತಿಗೆ ಬಿದ್ದಿದ್ದರು ಎನ್ನಲಾಗಿದೆ. ಈ ಪರಿಚಯವೇ ಹಂತ ಹಂತವಾಗಿ ಪ್ರೇಮಕ್ಕೆ ತಿರುಗಿದೆ.
2ನೇ ಪತಿಗೂ ಕೈಕೊಟ್ಟ ಮಹಿಳೆ:
ಮೋನಿಕಾ ಅವರು ಈಗಾಗಲೇ ತಮ್ಮ ಮೊದಲ ಗಂಡನನ್ನು ಬಿಟ್ಟು, ಎರಡನೇ ಗಂಡನ ಜೊತೆ ವಾಸವಿದ್ದರು ಎಂಬುದು ತಿಳಿದುಬಂದಿದೆ. ಇದೀಗ ಇನ್ಸ್ಟಾಗ್ರಾಮ್ ಪ್ರಿಯಕರ ರಾಘವೇಂದ್ರನಿಗಾಗಿ ಆಕೆ ತನ್ನ ಎರಡನೇ ಪತಿಯನ್ನೂ ತೊರೆದು ಎಸ್ಕೇಪ್ ಆಗಿದ್ದಾರೆ.
ಪೇದೆ ಅಮಾನತು:
ಪತ್ನಿ ಕಾಣೆಯಾದ ಬಗ್ಗೆ ಮೋನಿಕಾ ಅವರ ಪತಿ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಇಲಾಖೆಯ ಶಿಸ್ತು ಉಲ್ಲಂಘಿಸಿದ ಆರೋಪದಡಿ ಕಾನ್‌ಸ್ಟೇಬಲ್ ರಾಘವೇಂದ್ರ ಅವರನ್ನು ಅಮಾನತು (Suspension) ಮಾಡಿ ಆದೇಶ ಹೊರಡಿಸಲಾಗಿದೆ.






