Home State Politics National More
STATE NEWS

Mancity | ಕನ್ನಡದಲ್ಲಿ ಪೋಸ್ಟ್ ಮಾಡಿ ಕನ್ನಡಿಗರ ಮನಗೆದ್ದ ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ತಂಡ!!

Mancity
Posted By: Meghana Gowda
Updated on: Dec 13, 2025 | 4:38 AM

ಇಂಗ್ಲೆಂಡ್:‌  ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಕೇವಲ ಭಾರತೀಯರು ಮಾತ್ರವಲ್ಲ, ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಗಳು ಕೂಡ ಗೌರವ ನೀಡುತ್ತಿವೆ ಎಂಬುದಕ್ಕೆ ಇತ್ತೀಚಿನ ನಿದರ್ಶನ  ಇಂಗ್ಲೆಂಡ್‌ನ ಮ್ಯಾಂಚೆಸ್ಟರ್ ಸಿಟಿ (Manchester City) ಫುಟ್‌ಬಾಲ್ ಕ್ಲಬ್. ವಿಶ್ವದ ಅತ್ಯಂತ ಶ್ರೀಮಂತ ಮತ್ತು ಜನಪ್ರಿಯ ಫುಟ್‌ಬಾಲ್ ತಂಡಗಳಲ್ಲಿ ಒಂದಾದ ‘ಮ್ಯಾನ್ ಸಿಟಿ’, ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಕನ್ನಡದಲ್ಲಿ ಪೋಸ್ಟ್ ಮಾಡಿ ಕನ್ನಡಿಗರ ಹೃದಯ ಗೆದ್ದಿದೆ.

ಮ್ಯಾಂಚೆಸ್ಟರ್ ಸಿಟಿಯ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ (X/Twitter) “ನಗುವ ನಯನ, ಮಧುರ ವಿಜಯ ” ಎಂಬ ಸುಂದರವಾದ ಕನ್ನಡ ಶೀರ್ಷಿಕೆಯೊಂದಿಗೆ ತಂಡದ ಗೆಲುವಿನ ಕುರಿತು ಪೋಸ್ಟ್ ಮಾಡಲಾಗಿದೆ.

ಈ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಭಾರೀ ಸಂಖ್ಯೆಯಲ್ಲಿ ವೈರಲ್ (Viral) ಆಗಿದೆ. ಕನ್ನಡಿಗರು ಈ ಪೋಸ್ಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿ, ಕಾಮೆಂಟ್‌ಗಳು ಮತ್ತು ಲೈಕ್‌ಗಳ ಸುರಿಮಳೆಗೈದಿದ್ದಾರೆ. ಹಲವು ಕನ್ನಡ ಅಭಿಮಾನಿಗಳು, “ಕನ್ನಡದ ಬಗ್ಗೆ ನಿಮ್ಮ ಪ್ರೀತಿಗೆ ಧನ್ಯವಾದಗಳು,” “ಇದಕ್ಕಾಗಿಯೇ ನಾವು ಮ್ಯಾನ್ ಸಿಟಿಯನ್ನು ಪ್ರೀತಿಸುತ್ತೇವೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಕನ್ನಡದ ಮೇಲೆ ಮ್ಯಾನ್ ಸಿಟಿಯ ಪ್ರೀತಿ:

ಇದೇ ಮೊದಲಲ್ಲ, ಈ ಹಿಂದೆ ಕೂಡ ಮ್ಯಾಂಚೆಸ್ಟರ್ ಸಿಟಿ ಭಾರತೀಯ ಚಿತ್ರರಂಗದ, ಅದರಲ್ಲೂ ಮುಖ್ಯವಾಗಿ ಕನ್ನಡದ ದೊಡ್ಡ ಬ್ಲಾಕ್‌ಬಸ್ಟರ್ ಚಿತ್ರ ಕೆ.ಜಿ.ಎಫ್: ಚಾಪ್ಟರ್ 2 (K.G.F: Chapter 2) ಕುರಿತು ವಿಶಿಷ್ಟ ಶೈಲಿಯಲ್ಲಿ ಪೋಸ್ಟ್ ಮಾಡಿ ಸುದ್ದಿಯಾಗಿತ್ತು. ತಂಡದ ಮೂವರು ಪ್ರಮುಖ ಆಟಗಾರರಾದ ಕೆವಿನ್ ಡಿ ಬ್ರೂಯ್ನ್, ಇಲ್ಕೇ ಗುಂಡೋಗನ್, ಮತ್ತು ಫಿಲ್ ಫೋಡನ್ ಅವರ ಹೆಸರನ್ನು ಬಳಸಿ, “K.G.F, Kevin Gundo Foden” ಎಂದು ಬರೆದು ಅಭಿಮಾನಿಗಳ ಗಮನ ಸೆಳೆದಿತ್ತು.

ಇಷ್ಟೇ ಅಲ್ಲದೇ  2024 ರಲ್ಲಿ ಬಿಡುಗಡೆಯಾದ ರಿಷಬ್ ಶೆಟ್ಟಿ (Rishab Shetty) ಅಭಿನಯದ ‘ಕಾಂತಾರ ಚಾಪ್ಟರ್ 1’ (Kantara Chapter 1) ಸಿನಿಮಾ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಚರ್ಚೆಯಾಯಿತು. ಈ ಯಶಸ್ಸಿನ ಬೆನ್ನಲ್ಲೇ ಮ್ಯಾಂಚೆಸ್ಟರ್ ಸಿಟಿ ಕ್ಲಬ್, ರಿಷಬ್ ಶೆಟ್ಟಿ ಅವರ ಜಾಗದಲ್ಲಿ ಮ್ಯಾಂಚೆಸ್ಟರ್ ಸಿಟಿ ತಂಡದ ಸ್ಟ್ರೈಕರ್ ಆದ ಎರ್ಲಿಂಗ್ ಹಾಲಾಂಡ್ (Erling Haaland) ಅವರ ಫೋಟೋ ಹಾಕಿ ಪೋಸ್ಟ್‌ ಮಾಡಿತ್ತು. ಈ ವಿಶಿಷ್ಟ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿತ್ತು.

ಒಟ್ಟಿನಲ್ಲಿ, ಪ್ರಾದೇಶಿಕ ಭಾಷೆಗಳನ್ನು ಗೌರವಿಸುವ ಮೂಲಕ ಮ್ಯಾಂಚೆಸ್ಟರ್ ಸಿಟಿ ಕ್ಲಬ್ ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ತನ್ನ ಅಭಿಮಾನಿ ಬಳಗವನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿದೆ.

Shorts Shorts