ಬೆಂಗಳೂರು: ನವರಸ ನಾಯಕ, ನಟ ಜಗ್ಗೇಶ್ (Jaggesh) ಅವರು ತಮ್ಮ ಸರಳತೆ ಮತ್ತು ಹಳ್ಳಿಯ ಸೊಗಡಿನ ಪ್ರೀತಿಗೆ ಮತ್ತೊಮ್ಮೆ ಸಾಕ್ಷಿಯಾಗಿದ್ದಾರೆ. ನಿನ್ನೆ ತಡರಾತ್ರಿ ರಸ್ತೆ ಬದಿಯಲ್ಲಿ ಸಿಗುವ ತಳ್ಳುವ ಗಾಡಿಯಲ್ಲಿ ತಿಂಡಿ ಸವಿದಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ವೈರಲ್ ಆಗಿದೆ.
ಬಸವನಗುಡಿ ರಾಮಕೃಷ್ಣ ಆಶ್ರಮದ ಬಳಿ ರಾತ್ರಿ 11 ಗಂಟೆಯ ಸುಮಾರಿಗೆ ಜಗ್ಗೇಶ್ ಅವರು ತಳ್ಳುವ ಗಾಡಿಯಲ್ಲಿ ತಿಂಡಿ ಸೇವಿಸಿದ್ದಾರೆ. ಈ ಕುರಿತು ತಮ್ಮ ‘X’ ಖಾತೆಯಲ್ಲಿ ವಿಡಿಯೋ ಸಮೇತ ಪೋಸ್ಟ್ (Post) ಮಾಡಿರುವ ಅವರು, ಆ ರುಚಿಯನ್ನು ಬಣ್ಣಿಸಿದ್ದಾರೆ.
11 ಘಂಟೆ ರಾತ್ರಿಯಲ್ಲಿ ಹಸಿದ ಹೊಟ್ಟೆಗೆ ಮೃಷ್ಟಾನ್ನ ಭೋಜನ ಸವಿದ ಆನಂದ. ಬಸವನಗುಡಿ ರಾಮಕೃಷ್ಣ ಆಶ್ರಮ ಬಳಿ ತಳ್ಳೋಗಾಡಿ ತಿಂಡಿ ಅದ್ಭುತ. ಅಮ್ಮನ ಕೈತುತ್ತಿನ ಅನುಭವವಾಯಿತು. ಬಡವರ ಕೈ ರುಚಿಗೆ ಸಾಟಿ ಇಲ್ಲಾ ಎಂದು ಜಗ್ಗೇಶ್ ಅವರು ತಮ್ಮ ‘X’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅವರ ಈ ನಡೆ ಮತ್ತು ತಾಯಿಯ ಕೈತುತ್ತನ್ನು ನೆನೆದ ಭಾವನಾತ್ಮಕ ಪೋಸ್ಟ್ ಜಗ್ಗೇಶ್‌ರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.






