ಮಂಗಳೂರು: ಆನ್‌ಲೈನ್‌ನಲ್ಲಿ ಕೋಮುದ್ವೇಷ (Communal Hatred) ಹರಡುತ್ತಿದ್ದ ಆರೋಪಿಯೊಬ್ಬನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ವಿದೇಶದಲ್ಲಿ ಕುಳಿತುಕೊಂಡು ಹಿಂದೂಗಳ (Hindus) ವಿರುದ್ಧ ಪ್ರಚೋದನಕಾರಿ ಪೋಸ್ಟ್‌ಗಳನ್ನು ಹಾಕುತ್ತಿದ್ದ ಮಂಗಳೂರಿನ ಉಳಾಯಿಬೆಟ್ಟು ನಿವಾಸಿ ಅಬ್ದುಲ್ ಖಾದರ್ ಬಂಧಿತ ಆರೋಪಿ. ಕೇರಳದ ಕ್ಯಾಲಿಕಟ್ ಏರ್‌ಪೋರ್ಟ್‌ನಲ್ಲಿ (Calicut Airport) ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಅಬ್ದುಲ್ ಖಾದರ್ ಎಂಬಾತನು ‘Team SDPI’ ಹೆಸರಿನ ಪೇಜ್‌ನಲ್ಲಿ ಹಿಂದೂಗಳ ಬಗ್ಗೆ ನಿಂದಿಸುವ ಮತ್ತು ಕೋಮು ಪ್ರಚೋದನಕಾರಿ ಪೋಸ್ಟ್‌ಗಳನ್ನು ಕಳೆದ ಅಕ್ಟೋಬರ್ 11 ರಂದು ಹಂಚಿಕೊಂಡಿದ್ದ. ಪ್ರಕರಣ ದಾಖಲಿಸಿದ ಮಂಗಳೂರು ಪೊಲೀಸರು ಆರೋಪಿಯ ವಿರುದ್ಧ ಲುಕೌಟ್ ನೋಟಿಸ್ (Lookout Notice) ಹೊರಡಿಸಿದ್ದರು.
ವಿದೇಶದಿಂದ ಬರುತ್ತಿದ್ದಾಗ ಬಂಧನ:
ವಿದೇಶದಲ್ಲಿದ್ದ ಆರೋಪಿ ಅಬ್ದುಲ್ ಖಾದರ್ ಕೇರಳದ ಕ್ಯಾಲಿಕಟ್ ಏರ್‌ಪೋರ್ಟ್‌ಗೆ ಬಂದಾಗ, ಲುಕೌಟ್ ನೋಟಿಸ್ ಆಧಾರದ ಮೇಲೆ ವಲಸೆ ಅಧಿಕಾರಿಗಳು (Immigration Officials) ಆತನನ್ನು ವಶಕ್ಕೆ ಪಡೆದರು. ಕೂಡಲೇ ಮಂಗಳೂರು ಪೊಲೀಸರು ಸ್ಥಳಕ್ಕೆ ತೆರಳಿ ಅಬ್ದುಲ್ ಖಾದರ್‌ನನ್ನು ಬಂಧಿಸಿದ್ದಾರೆ.
ಕೋಮುದ್ವೇಷ ಹರಡುವವರ ಮೇಲೆ ಹದ್ದಿನ ಕಣ್ಣಿಟ್ಟಿರುವ ಮಂಗಳೂರು ಪೊಲೀಸರು, ವಿದೇಶದಲ್ಲಿದ್ದುಕೊಂಡು ಆನ್‌ಲೈನ್‌ನಲ್ಲಿ ಕೋಮು ದ್ವೇಷ ಹರಡುವವರ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಎಚ್ಚರಿಕೆ ನೀಡಿದ್ದಾರೆ.






