ದೆಹಲಿ: ಕರ್ನಾಟಕದ 7 ಸಚಿವರು ಮತ್ತು 20ಕ್ಕೂ ಹೆಚ್ಚು ಶಾಸಕರಿಗೆ ಇಂಡಿಗೋ (Indigo) ವಿಮಾನಯಾನದಿಂದಾಗಿ ಭಾರೀ ವಿಳಂಬ ಅನುಭವವಾಗಿದ್ದು, ಹವಾಮಾನ ವೈಪರೀತ್ಯದಿಂದಾಗಿ ಅವರು ದೆಹಲಿ ವಿಮಾನ ನಿಲ್ದಾಣದಲ್ಲೇ (Delhi Airport) ಕಾಯುವಂತಾಗಿದೆ.
ದೆಹಲಿಯಿಂದ ಬೆಳಗಾವಿಗೆ (Belagavi) ಪ್ರಯಾಣ ಬೆಳೆಸಬೇಕಿದ್ದ ವಿಮಾನದಲ್ಲಿ ಕರ್ನಾಟಕದ ಹಲವು ಪ್ರಭಾವಿ ಸಚಿವರು ಮತ್ತು ಶಾಸಕರು ಪ್ರಯಾಣಿಸುತ್ತಿದ್ದರು. ಬೆಳಗ್ಗೆ 5.40 ಕ್ಕೆ ದೆಹಲಿಯಿಂದ ಟೇಕಾಫ್ ಆಗಬೇಕಿದ್ದ ಇಂಡಿಗೋ ವಿಮಾನವು ಹವಾಮಾನ ವೈಪರೀತ್ಯ (Weather Disturbances) ದಿಂದಾಗಿ ಇನ್ನೂ ಹಾರಾಟ ಆರಂಭಿಸಿಲ್ಲ.
ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಶರಣಪ್ರಕಾಶ್ ಪಾಟೀಲ್, ಎಚ್.ಕೆ. ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿ ಒಟ್ಟು 7 ಸಚಿವರು ಮತ್ತು 20ಕ್ಕೂ ಹೆಚ್ಚು ಶಾಸಕರು ಇದೇ ವಿಮಾನದಲ್ಲಿ ಪ್ರಯಾಣ ಬೆಳೆಸಬೇಕಿತ್ತು. ವಿಮಾನ ವಿಳಂಬವಾದ ಕಾರಣ, ಎಲ್ಲ ನಾಯಕರು ದೆಹಲಿಯ ವಿಮಾನ ನಿಲ್ದಾಣದಲ್ಲೇ ಉಳಿದುಕೊಳ್ಳುವಂತಾಗಿದೆ.






