ದಾವಣಗೆರೆ: ಕಾಂಗ್ರೆಸ್ನ ಹಿರಿಯ ನಾಯಕ, ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾ ಸಭೆಯ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ (94) (Shamanur Shivashankarappa) ಅವರು ವಯೋಸಹಜ ಅನಾರೋಗ್ಯದಿಂದ ಭಾನುವಾರ ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ಇಂದು ಸಂಜೆ 4,30ಕ್ಕೆ ನಡೆಯಲಿದೆ.
ಕುಟುಂಬದ ಒಡೆತನದ ಕಲ್ಲೇಶ್ವರ ಮಿಲ್ (Kalleshwara Mill) ಆವರಣದಲ್ಲಿರುವ ಅವರ ಪತ್ನಿ ಪಾರ್ವತಮ್ಮ (Parvathamma) ಅವರ ಸಮಾಧಿ ಬಳಿಯೇ ಶಿವಶಂಕರಪ್ಪ ಅವರ ಅಂತ್ಯಕ್ರಿಯೆಯನ್ನು ಮಾಡಲಾಗುತ್ತದೆ.
ಅಂತಿಮ ದರ್ಶನಕ್ಕೆಂದು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆಯಿಂದ ಮಧ್ಯಾಹ್ನ 12ರ ವರೆಗೆ ಶಾಮನೂರ ಅವರ ಮಗ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಅವರ ಮನೆಯಲ್ಲಿ ಪಾರ್ಥಿವ ಶರೀರ ಇರಲಿದೆ. ಇಲ್ಲಿ ಕುಟುಂಬ ಸದಸ್ಯರು ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಪೂಜೆ ಸಲ್ಲಿಸಲಿದ್ದಾರೆ. ಹಾಗೂ ಇಲ್ಲಿ ಅಂತಿಮ ದರ್ಶನ ಮಾಡಲು ಗಣ್ಯರಿಗೆ ಮಾತ್ರ ಅವಕಾಶವಿರುತ್ತದೆ.
12 ಗಂಟೆಯಿಂದ ನಗರದ ಹೈಸ್ಕೂಲ್ ಗ್ರೌಂಡ್ ಆವರಣದಲ್ಲಿಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಅವರು ತಿಳಿಸಿದ್ದಾರೆ.






